ಬೀದರ್: ‘ಬೀದರ್ ನಗರದ ದಿ ಗಾಂಧಿ ಗಂಜ್ ಕೋ–ಆಪರೇಟಿವ್ ಬ್ಯಾಂಕಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬರುವ ಅಕ್ಟೋಬರ್‌ನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಅಣ್ಣೆಪ್ಪ ಪಾಟೀಲ ಗಾದಗಿ ತಿಳಿಸಿದರು.
ನಗರದ ಬ್ಯಾಂಕಿನಲ್ಲಿ ಭಾನುವಾರ ನಡೆದ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿದರು.
ಸುವರ್ಣ ಮಹೋತ್ಸವ ಸಮಾರಂಭ ಏಳು ದಿನಗಳವರೆಗೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ₹1.25 ಕೋಟಿ ನಿವ್ವಳ ಲಾಭ ಗಳಿಸಿದೆ. ಔರಾದ್‌ನಲ್ಲಿ (ಬಿ) ಹೊಸ ಶಾಖೆ ಆರಂಭಿಸಲಾಗುವುದು ಎಂದು ಘೋಷಿಸಿದರು.
ಬ್ಯಾಂಕ್ 8,796 ಸದಸ್ಯರನ್ನು ಹೊಂದಿದೆ. ₹5.19 ಕೋಟಿ ಷೇರು ಬಂಡವಾಳ, ₹226.41 ಕೋಟಿ ಠೇವಣಿ, ಸಾಲ ಮತ್ತು ಮುಂಗಡ ₹151.25 ಕೋಟಿ, ದುರ್ಬಲ ವರ್ಗದ ಸಾಲ ₹24.64 ಕೋಟಿ ಇದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾನಂದ ಪಾಟೀಲ ಮಾತನಾಡಿ,‘ಪ್ರಸಕ್ತ ಸಾಲಿನಲ್ಲಿ ₹255 ಕೋಟಿ ಠೇವಣಿ ಸಂಗ್ರಹ, ₹187 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ₹291 ಕೋಟಿ ದುಡಿಯುವ ಬಂಡವಾಳದ ಗುರಿ ಇಟ್ಟುಕೊಳ್ಳಲಾಗಿದೆ. ಗ್ರಾಹಕರಿಗೆ ಫೋನ್ ಪೇ, ಯು.ಪಿ.ಐ, ಗೂಗಲ್ ಪೇ, ಪೇ.ಟಿ.ಎಂ, ನ್ಯಾಚ್, ಐ.ಎಂ.ಪಿ.ಎಸ್, ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ಬೀದರ್ ನಗರದ ಹೊರವಲಯದಲ್ಲಿ ಸಹಕಾರಿ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಹಿರಿಯ ಸದಸ್ಯ ಶಿವಶರಣಪ್ಪ ವಾಲಿ ಮಾತನಾಡಿ,‘ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿ.ಮಹಂತಪ್ಪ ಮಡಕಿ ಅವರ ಚಿತ್ರ ಪುಸ್ತಕದ ಮೇಲೆ ಪ್ರಕಟಿಸಬೇಕು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆ ಕಾಯಂಗೊಳಿಸಬೇಕು. ಭಾರತ ಸೇವಾದಳದಿಂದ ರಾಷ್ಟ್ರ ಧ್ವಜದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.
ಬಸವಣಪ್ಪ ನೇಳಗಿ, ಶರಣಪ್ಪ ಬಿರಾದಾರ, ಬಿ.ಜಿ.ಶೆಟಕಾರ, ನಾಗಶೆಟ್ಟಿ ಧರಮಪೂರ, ಚಂದ್ರಶೇಖರ ಗಾದಾ, ಚನ್ನಬಸವರಾಜ ಹರಡಗೆ, ನಾಗಭೂಷಣ ಕಮಠಾಣೆ, ಬಿ.ಎಸ್.ಪಾಟೀಲ, ಟಿ.ಆರ್.ದೊಡ್ಡೆ ಹಾಗೂ ಭಾರತಿ ವಸ್ತ್ರದ್ ಮಾತನಾಡಿದರು.
ಇತ್ತೀಚೆಗೆ ನಿಧನರಾದ ಬ್ಯಾಂಕಿನ ಮಾಜಿ ನಿರ್ದೇಶಕರೂ ಆಗಿದ್ದ ಮಾಜಿ ಶಾಸಕ ರಮೇಶಕುಮಾರ ಪಾಂಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ಕಾಶಿನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಸುನೀಲಕುಮಾರ ಬಿರಾದಾರ, ಜೈಕುಮಾರ ಕಾಂಗೆ, ಕಮಲ ಕಿಶೋರ ಅಟ್ಟಲ್, ಅಂತೇಶ್ವರ ಶೆಟಕಾರ, ಭರತ ಶೆಟಕಾರ, ಅಮರನಾಥ ಫುಲೇಕರ, ಶಿವನಾಥ ಪಾಟೀಲ, ಶಾಂತಾ ಖಂಡ್ರೆ, ಜ್ಯೋತಿ ಗೌರಶೆಟ್ಟಿ, ಮಲ್ಲಿಕಾರ್ಜುನ ಕಾರಬಾರಿ ಹಾಗೂ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.