ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭಾನುವಾರ ತಡರಾತ್ರಿ 3ಗಂಟೆಗೆ ಬೀದರ್‌ನ ಚೌಬಾರ ಬಳಿ ತುಂತುರು ಮಳೆಯಲ್ಲೇ ನಿಂತು ಮೆರವಣಿಗೆ ಗಮನಿಸಿದರು
ಮೆರವಣಿಗೆಯಲ್ಲಿ ಬಾಲಕಿಯೊಬ್ಬಳು ಕೋಲು ಹಿಡಿದು ಹಗ್ಗದ ಮೇಲೆ ನಡೆದು ಎಲ್ಲರ ಗಮನ ಸೆಳೆದಳು
ಗಣೇಶನ ಮೂರ್ತಿಗಳ ಮೆರವಣಿಗೆ ಕಣ್ತುಂಬಿಕೊಳ್ಳಲು ಬೀದರ್‌ನ ಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿ ಸೇರಿದ್ದ ಜನಸ್ತೋಮ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಸೋಮವಾರ ನಸುಕಿನ ಜಾವ 4ಗಂಟೆಗೆ ಚೌಬಾರ ಎದುರು ಬಂದ ಪ್ರತಾಪ್ ನಗರ–ನೌಬಾದ್ ಗಣಪನ ಮೇಲೆ ಹೂಮಳೆಗರೆದು ಸ್ವಾಗತಿಸಿದರು
ವಿಘ್ನ ನಿವಾರಕನ ಮೆರವಣಿಗೆ ಹಾದು ಹೋದ ಬೀದರ್‌ನ ಬಸವೇಶ್ವರ ವೃತ್ತದಿಂದ ಚೌಬಾರ ಸಂಪರ್ಕ ಕಲ್ಪಿಸುವ ರಸ್ತೆ ವಿದ್ಯುತ್ ದೀಪಗಳಿಂದ ಭಾನುವಾರ ರಾತ್ರಿ ಕಂಗೊಳಿಸಿದ್ದು ಹೀಗೆ
ಡಿಜೆ ಸದ್ದು ಬೆಳಕಿನಲ್ಲಿ ಯುವಕರು ಮೈಮರೆತು ಕುಣಿದರು
ಮೆರವಣಿಗೆಯಲ್ಲಿ ಎತ್ತರದ ಗಣಪನ ಮೂರ್ತಿ ಹಾದು ಹೋದಾಗ ಕಂಡ ದೃಶ್ಯ
ಚಿಕ್ಕ ಗಣಪನ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಯುವಕರು ಹೆಜ್ಜೆ ಹಾಕಿದ್ದು
ಬೀದರ್‌ನ ಚೌಬಾರ ಬಳಿ ದೇವಿ ಕಾಲೊನಿಯ ಸಂಭಾಜಿ ಮಹಾರಾಜ ಗಣಪ ಬಂದಾಗ ಗಣೇಶ ಮಹಾಮಂಡಳದವರು ಹೂಮಳೆಗರೆದು ಸ್ವಾಗತಿಸಿದ್ದು ಹೀಗೆ
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ