ಗುರುವಾರ , ಫೆಬ್ರವರಿ 20, 2020
27 °C

ಬೀದರ್: ವಚನ ಗ್ರಂಥದ ಅದ್ಧೂರಿ ಮೆರವಣಿಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀದರ್: ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ‘ವಚನ ವಿಜಯೋತ್ಸವ’ ಅರ್ಥಪೂರ್ಣವಾಗಿ ನಡೆದ ಪ್ರಯುಕ್ತ ಭಾನುವಾರ ನಗರದಲ್ಲಿ ವಚನ ಸಾಹಿತ್ಯದ ಅದ್ಧೂರಿ ಮೆರವಣಿಗೆ ಆರಂಭವಾಗಿದೆ.

ಸೊಲ್ಲಾಪುರದ ನಂದಿಕೋಲು, ಬಸಾಪುರದ ಬಸವ ಸೇನಾ ಝಾಂಜ್ ಮೇಳ, ದಾಣಗೆರೆಯ ಭಜನಾ ಮೇಳ, ಮಂಡ್ಯದ ಪೂಜಾ ಕುಣಿತ–ತಮಟೆ ತಂಡ, ಬೆಳ್ಳೆರಿಯ ಮಹಿಳಾ ಡೊಳ್ಳು, ಬರೂರಿನ ಚಿಟಕಿ ಭಜನೆ–ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ ಮೆರವಣಿಗೆಯಲ್ಲಿ ಕಲಾ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ

ಬೀದರ್‌ನ ಕೋಲಾಟ, ವಿದ್ಯಾರ್ಥಿನಿಯರ ಲೇಜಿಮ್‌, ಭಜನಾ ತಂಡಗಳು ವಚನ ಗಾಯನದ ಮೂಲಕ ಭಕ್ತಿಭಾವ ಮೆರೆದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಬಸವ ಜ್ಯೋತಿ ತಂಡಗಳು, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತ ಒಂದು ಸಾವಿರ ಮಹಿಳೆಯರು ಕಳೆಕಟ್ಟಿದ್ದಾರೆ.

ಸಂಗೀತ ನಾದ ನಿನಾದಕ್ಕೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)