ಬಾವಲಗಾಂವ್‌ನಲ್ಲಿ ಅಂದು ಸುರಿದ ಭಾರಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. 50 ಮನೆಗಳಿಗೆ ಹಾನಿಯಾಗಿದೆ. 30 ಮನೆಗಳಿಗೆ ಈಗಾಗಲೇ ಪರಿಹಾರ ಕೊಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೆರೆ ಕೋಡಿ ಒಡೆದು ಹಾನಿಯಾದ ರೈತರಿಗೆ ವಿಶೇಷ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಬೆಳೆ ಹಾನಿ ಸರ್ವೆ ನಡೆಯುತ್ತಿದ್ದು, ಹಾನಿಯಾದ ಎಲ್ಲ ರೈತರಿಗೆ ಪರಿಹಾರ ಕೊಡಿಸುತ್ತೇವೆ ಎಂದಿದ್ದಾರೆ.
ಮಹೇಶ ಪಾಟೀಲ, ತಹಶೀಲ್ದಾರ್ ಮಹೇಶ
ಈ ಬಾರಿ ಸುರಿದ ಮಳೆಯಿಂದ ಬಾವಲಗಾಂವ್ ರೈತರು ಹೆಚ್ಚಿನ ತೊಂದರೆ ಎದುರಿಸಿದ್ದಾರೆ. ಕೆರೆ ಕೋಡಿ ಒಡೆದು ಭೂಮಿ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡಿದ್ದೇವೆ.
ಮಹೇಶ ಪಾಟೀಲ ತಹಶೀಲ್ದಾರ್ ಔರಾದ್
ಕೆರೆ ಕೋಡಿ ಒಡೆದು ನಮ್ಮ 5 ಎಕರೆ ಜಮೀನು ಮಣ್ಣಿನ ಜತೆ ಕೊಚ್ಚಿ ಹೋಗಿದೆ. ಕೃಷಿ ಮೇಲೆ ಬದುಕುತ್ತಿರುವ ನಮಗೆ ಈಗ ಏನು ಮಾಡಬೇಕು ಎಂದು ತೋಚದಾಗಿದೆ.