ಹುಲಸೂರ: ಜಿಲ್ಲೆಯಲ್ಲಿ ಅತಿ ಚಿಕ್ಕ ತಾಲ್ಲೂಕು. ಪಟ್ಟಣ ಕೂಡ ಕಿರಿದಾಗಿದೆ. ಆದರೆ ಸಮಸ್ಯೆಗಳು ಮಾತ್ರ ಬೃಹದಾಕಾರ ತಾಳಿವೆ. ಅದುವೇ ಹುಲಸೂರ ತರಕಾರಿ ಮಾರುಕಟ್ಟೆಯ ಸೋಮವಾರ ಸಂತೆ.

ಪ್ರತಿ ಸೋಮವಾರ ನಡೆಯುವ ಸಂತೆಗೆ ತಾಲ್ಲೂಕಿನ ಹತ್ತಾರು ಮೂಲೆಗಳಿಂದ, ಬೇರೆ ಬೇರೆ ಭಾಗಗಳಿಂದ ರೈತರು ತಾವು ಬೆಳೆದ ಹಣ್ಣು, ತರಕಾರಿಯೊಂದಿಗೆ ಹಾಗೂ ವ್ಯಾಪಾರಿಗಳು ತಮ್ಮ ಸರಕುಗಳೊಂದಿಗೆ ಬರುತ್ತಾರೆ. ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಎಲ್ಲಾ ವರ್ಗಗಳ ಜನರು ಬರುತ್ತಾರೆ. ಆದರೆ ಇಂಥ ಸಮೃದ್ಧ ವ್ಯಾಪಾರ ಚಟುವಟಿಕೆಯ ಕೇಂದ್ರವಾದ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ.

ಪಟ್ಟಣದಲ್ಲಿ ಸಂತೆ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಜೆಜೆಎಂ ಕಳಪೆ ಕಾಮಗಾರಿಯಿಂದ ಗುಂಡಿಗಳು ಬಿದ್ದಿದ್ದು, ಜನರು ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಪಟ್ಟಣದ ಜನಸಂಖ್ಯೆ 18 ಸಾವಿರ ಮೀರಿದೆ. ಆದರೆ, ಇಂದಿಗೂ ಇಕ್ಕಟ್ಟಾದ ಸ್ಥಳದಲ್ಲೇ ಸಂತೆ ನಡೆಯುತ್ತಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ.

ಹಂದಿಗಳ ಕಾಟ: ವಾರದ ಸಂತೆ ನಡೆಯುವ ಜಾಗದಲ್ಲಿ ವ್ಯಾಪಾರಿಗಳಿಗೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಒಂದು ವಾರ ಗಾಂಧಿ ವೃತ್ತದಲ್ಲಿ ಹಾಗೂ ಇನ್ನೊಂದು ವಾರ ಹನುಮನ ಮಂದಿರದ ಬಳಿ ಮಾರುಕಟ್ಟೆ ನಡೆಯುತ್ತದೆ. ಈ ವೇಳೆ ತ್ಯಾಜ್ಯ ಪದಾರ್ಥವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಹಂದಿಗಳ ಕಾಟ ಮಿತಿಮೀರಿದೆ. ಮಳೆ ಬಂದರೆ ಕೆಸರಲ್ಲೇ ಸಂತೆ ವ್ಯಾಪಾರಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸ್ಥಳೀಯರಿಗೂ ತೊಂದರೆಯಾಗಿದೆ.

ಪಾದಚಾರಿ ಮಾರ್ಗವಿಲ್ಲ: ಸಂತೆ ದಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚುತ್ತದೆ. ಸಂತೆ ದಿನಗಳಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಕೂಡ ಇಲ್ಲದೆ ವಾಹನ ರಸ್ತೆಗಳ ಎರಡೂ ಬದಿಗೆ ಹೇಗೆಂದರೆ ಹಾಗೆ ನಿಲ್ಲುತ್ತವೆ. ಸೂಕ್ತವಾದ ಪಾದಚಾರಿ ಮಾರ್ಗ ಇಲ್ಲದ ಕಾರಣ ಅಪಾಯದ ನಡುವೆಯೇ ಜನರೂ, ವಾಹನಗಳೂ ರಸ್ತೆಯ ಮೇಲೆಯೇ ಸಾಗಬೇಕಾಗಿದೆ. ಹಿರಿಯರು, ಮಕ್ಕಳಿಗಂತೂ ತಂತಿ ಮೇಲೆ ನಡೆದಂತಹ ಸ್ಥಿತಿ.

ಸಂತೆ ಮೈದಾನದಲ್ಲಿ ಪ್ರತಿ ಅಂಗಡಿಗಳಿಂದ ಸುಂಕ ವಸೂಲಿ ಮಾಡಲಾಗುತ್ತದೆ. ದಿನ ನಿತ್ಯ ಹೂ, ಹಣ್ಣು, ತರಕಾರಿ ಮಾರಾಟಗಾರರಿಂದ ದಿನನಿತ್ಯ ನೂರಾರು ರೂಪಾಯಿ ಸುಂಕ ವಸೂಲಿ ಮಾಡಲಾಗುತ್ತದೆ. ಆದರೂ ವ್ಯಾಪಾರಕ್ಕೆ ಸೂಕ್ತ ಸ್ಥಳ ಒದಗಿಸಿಲ್ಲ. ಸೌಲಭ್ಯವೂ ಇಲ್ಲ.

ಪ್ಲಾಸ್ಟಿಕ್ ವಿಲೇವಾರಿ ಬಹುದೊಡ್ಡ ಸಮಸ್ಯೆ: ನಿಷೇಧಿತ ಪ್ಲಾಸ್ಟಿಕ್ ಬಳಸಲಾಗುತ್ತದೆ, ಬಳಸಿದ ನಂತರ ಅದರ ವಿಲೇವಾರಿಗೂ ವ್ಯವಸ್ಥೆ ಇಲ್ಲ. ಇದೂ ಕೂಡ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ಚರಂಡಿ ಸೇರುತ್ತಿದೆ. ಚರಂಡಿ ಕಟ್ಟಿ ಹೋಗಿ ತೊಂದರೆಯಾಗುತ್ತಿದೆ. ಪರಿಸರಕ್ಕೂ ಇದರಿಂದ ಹಾನಿ ಉಂಟಾಗುತ್ತಿದೆ. ಮನುಷ್ಯನಿಗೆ ಅಷ್ಟೇ ಅಲ್ಲದೆ ಇತರೆ ಜೀವಸಂಕುಲಗಳಿಗೂ ಮಾರಕವಾಗಿದೆ. ಜಾನುವಾರುಗಳ ದೇಹ ಸೇರಿ ಜೀವಕ್ಕೆ ಕುತ್ತು ತರುತ್ತಿದೆ. ಪಟ್ಟಣದ ವಿವಿಧ ಓಣಿಗಳಲ್ಲಿ ಒಣಕಸದ ಜೊತೆಗೆ ಪ್ಲಾಸ್ಟಿಕ್ಗೆ ಬೆಂಕಿ ಹಚ್ಚಲಾಗುತ್ತದೆ ಎಂಬ ದೂರುಗಳು ಕೂಡ ಇವೆ.

ಬೇಕು ಸಾರ್ವಜನಿಕ ಜಾಗೃತಿ: ತರಕಾರಿ, ಹೂವು, ಹಣ್ಣು ಮಾರುಕಟ್ಟೆಯಲ್ಲಿ ಇಂದಿಗೂ ಏಕ ಬಳಕೆ ಪ್ಲಾಸ್ಟಿಕ್ ಲಭ್ಯವಾಗುತ್ತಿದೆ. ದಿನಸಿ ಅಂಗಡಿ, ಹೋಟೆಲ್, ಬೀದಿ ಬದಿ ವ್ಯಾಪಾರಸ್ಥರು ಯಾವ ಭಯವೂ ಇಲ್ಲದೇ ನಿಷೇಧಿತ ಪ್ಲಾಸ್ಟಿಕ್ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಏಕಬಳಕೆ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಿದೆ. ಪರ್ಯಾಯವಾಗಿ ಬಟ್ಟೆ ಚೀಲ ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಬೇಕಿದೆ.

‘ರೈತರು, ತರಕಾರಿ ಬೆಳೆಯುವವರ ಹಿತರಕ್ಷಣೆಗೆ ನಾವಿದ್ದೇವೆ ಎಂದೆಲ್ಲ ಮಾತನಾಡುವ ಸರ್ಕಾರ ಮತ್ತು ಅದರ ಭಾಗವಾಗಿರುವ ಜನಪ್ರತಿನಿಧಿಗಳು ಕುಂದುಕೊರತೆಗಳನ್ನು ನಿವಾರಿಸಬೇಕು. ಪಟ್ಟಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂಬ ಮಾತುಗಳನ್ನು ಮೂರು ದಶಕಗಳಿಂದಲೂ ಕೇಳುತ್ತಿದ್ದೇವೆ. ಆದರೆ, ಅನುಷ್ಠಾನವಾಗಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು’ ಎಂದು ತರಕಾರಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಶೌಚಾಲಯವಿಲ್ಲ: ಪ್ರತಿವಾರ ನಡೆಯುವ ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ. 200ಕ್ಕೂ ಅಧಿಕ ವ್ಯಾಪಾರಿಗಳು ಸೇರುತ್ತಾರೆ. ಆದರೆ, ಇಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರಿಗೂ ವ್ಯವಸ್ಥೆ ಇಲ್ಲದೇ ಜನರು–ವಾಪಾರಸ್ಥರು ಹೈರಾಣಾಗಿದ್ದಾರೆ.

ಇಕ್ಕಟ್ಟಿನಿಂದ ಕೂಡಿದ ಮಾರುಕಟ್ಟೆಯಲ್ಲೇ ಗ್ರಾಮ ಪಂಚಾಯಿತಿ ಕಟ್ಟಡ, ಗ್ರಂಥಾಲಯ, ಗಾಂಧಿ & ಅಂಬೇಡ್ಕರ್ ಪ್ರತಿಮೆ, ಬೋಮ್ಮಗೊಂಡೇಶ್ವರ ಪ್ರತಿಮೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಅಲ್ಲಿಗೆ ಹೋಗಿ ಬರಲು ಮಕ್ಕಳಿಗೂ ತೊಂದರೆಯಾಗುತ್ತಿದೆ.

ಈ ಸಂತೆಗೆ ಸುತ್ತಲಿನ 20 ಗ್ರಾಮಗಳಿಂದ ಜನರು ಬರುತ್ತಾರೆ. ಆದರೆ ಕನಿಷ್ಠ ಮೂಲಸೌಕರ್ಯ ದೊರಕದೆ ತೊಂದರೆಯಾಗುತ್ತಿದೆ
ಸುವರ್ಣಾ ಗ್ರಾಹಕಿ ಗಡಿಗೌಡಗಾಂವ

ಸಂತೆ ಸ್ಥಳದಲ್ಲಿನ ಸಮಸ್ಯೆ ನಿವಾರಿಸಿ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗುವುದು
ಶಿವಾನಂದ ಮೇತ್ರೆ ಹುಲಸೂರ ತಹಶೀಲ್ದಾರ್

ಸಂತೆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಜನರ ಗೋಳು ಹೇಳತೀರದಾಗಿದೆ. ಕನಿಷ್ಠ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು
ವಿಷ್ಣುಕಾಂತ ಹಿರಣಾಯಿಕ ತರಕಾರಿ ವ್ಯಾಪಾರಿ

ಹುಲಸೂರ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ವ್ಯಾಪಾರಿಗಳಿಂದ ಹಣ ಪಡೆಯುತ್ತಾರೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ಸೌಲಭ್ಯ ಕಲ್ಪಿಸಿಲ್ಲ
ಸುನೀತಾ ಗ್ರಾಹಕಿ ಸೋಲದಾಪಕಾ

ಸಂತೆ ಸ್ಥಳಾಂತರಿಸಿ...:

ಸುಮಾರು ವರ್ಷಗಳಿಂದ ಸಂತೆಗೆ ಬರುತ್ತಿದ್ದೇವೆ. ವರ್ಷಗಳಿಂದಲೂ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಆಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಈ ಸಂತೆ ಹೆಚ್ಚು ಅನುಕೂಲವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಕೆಲ ವ್ಯಾಪಾರಿಗಳ ಬೇಡಿಕೆಯಾಗಿದೆ. ಹುಲಸೂರ ಗ್ರಾಮ ಪಂಚಾಯಿತಿ ಅಧಿಕಾರಿಗಳು ವ್ಯಾಪಾರಿಗಳಿಂದ ಕರ ವಸೂಲಿ ಮಾಡುತ್ತಾರೆ. ಆದರೆ ಕನಿಷ್ಠ ಸೌಲಭ್ಯ ಕಲ್ಪಿಸುವ ವಿಚಾರ ಬಂದಾಗ ಜಾಣಮೌನ ವಹಿಸಿದ್ದಾರೆ. ಹಾಗಾಗಿ ಈ ಸಂತೆಯನ್ನೇ ಸುಸಜ್ಜಿತ ಹಾಗೂ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗು ಇನ್ನೂ ಕೆಲಸ ವ್ಯಾಪಾರಸ್ಥರದ್ದಾಗಿದೆ. ಇದಕ್ಕೆ ಇಲ್ಲಿನ ಸಾರ್ವಜನಿಕರ ಒಮ್ಮತವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.