ಹುಮನಾಬಾದ್: ‘ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಬೀದರ್ ಜಿಲ್ಲಾ ಪಂಚಾಯಿತಿ, ಹುಮನಾಬಾದ್ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ 76ನೇ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ, ‘ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಕೆಲವರು ಹೇಳ್ಳುತ್ತಿದ್ದಾರೆ. ಸೂರ್ಯ–ಚಂದ್ರ ಇರುವರೆಗೂ ಅದು ಅದು ಸಾಧ್ಯವಿಲ್ಲ. ಎಲ್ಲರೂ ಸಂವಿಧಾನ ಅಧ್ಯಯನ ಮಾಡಬೇಕು’ ಎಂದರು.

ಅಶೋಕ ದೋಡ್ಡಮನಿ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್, ಪುರಸಭೆ ಮುಖ್ಯಾಧಿಕಾರಿ ವನಿತಾಬಾಯಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಿಂಗರಾಜ ಅರಸ್, ಡಾ.ಗೋವಿಂದ್, ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ, ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ಗಣಪತಿ ಅಷ್ಟೋರೆ, ರವಿ ಹೊಸಳ್ಳಿ, ಗೌತಮ ಚೌಹಾಣ್, ಅನೀಲ ದೋಡ್ಡಿ, ರಾಹುಲ ಉದ್ದಾ, ಅನೀಲ ಪಸರ್ಗಿ, ನಾಗಭೂಷಣ ಸಂಗಮ್, ಮಧುಕರ ಹಿಲಾಪುರ, ಮಹಾಂತೇಶ ಸೇರಿದಂತೆ ಇತರರು ಇದ್ದರು.

ಮೆರವಣಿಗೆ: ಸಂವಿಧಾನ ದಿನದ ನಿಮಿತ್ತ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಹತ್ತಿರ ಸಂವಿಧಾನ ಭಾವಚಿತ್ರದ ಜಾಥಾಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಚಾಲನೆ ನೀಡಿದರು. ಅಲ್ಲಿಂದ ಶಿವಾಜಿ ವೃತ್ತ, ಬಸವೇಶ್ವರ, ಬಾಲಾಜಿ ಮಂದಿರ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಮೂಲಕ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಾಥಾ ನಡೆಯಿತು.

‘ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ’ ‘ಸಂವಿಧಾನ ದಿನ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಏಕೆ ಭಾಗವಹಿಸಿಲ್ಲ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಸೂಚಿಸಿದರು. ‘ತಾಲ್ಲೂಕಿನಲ್ಲಿ ಸುಮಾರು 36 ರಿಂದ 40 ಜನ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದಾರೆ. ಕೇವಲ 3–4 ಜನ ಕಾರ್ಯಕ್ರಮಕ್ಕೆ ಬಂದಿದ್ದಾರೆ ಏಕೆ?’ ಎಂದು ತಹಶೀಲ್ದಾರ್ ಅಂಜುಂ ತಬಸುಮ್ ಅವರನ್ನು ಪ್ರಶ್ನಿಸಿದರು. ‘ಅವರಿಗೆ ಮಾಹಿತಿ ನೀಡಿಲ್ಲವೆ? ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದೇ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಹೇಳಿ? ಯಾವ ಅಧಿಕಾರಿ ಬಂದಿಲ್ಲ ಎಂಬ ಮಾಹಿತಿ ಪಡೆದು ಅವರಿಗೆ ನೋಟಿಸ್ ನೀಡಿ ನನಗೂ ಮಾಹಿತಿ ನೀಡಿ ಸರ್ಕಾರಕ್ಕೆ ಈ ಮಾಹಿತಿ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.