ಬುಧವಾರ, ಜನವರಿ 19, 2022
18 °C

ಪ್ರತಿ ತಾಲ್ಲೂಕಿನಲ್ಲೂ ಕನ್ನಡ ಭವನ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣದ ಹಂತದಲ್ಲಿರುವ ಕನ್ನಡ ಸಾಂಸ್ಕೃತಿಕ ಭವನವನ್ನು ಚುನಾಯಿತ ಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಅಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನ್ನ ಕನ್ನಡದ ಸೇವೆಯನ್ನು ಪರಿಗಣಿಸಿ ಸಾಹಿತ್ಯ ಪರಿಷತ್ತಿನ ಮತದಾರರು ಇನ್ನೊಂದು ಅವಧಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಹುಸಿಗೊಳಿಸದೆ, ಎಲ್ಲರೂ ಮೆಚ್ಚುವ ರೀತಿಯಲ್ಲಿ ಕನ್ನಡದ ಕೆಲಸಗಳನ್ನು ಮಾಡುವೆ’ ಎಂದು ಹೇಳಿದರು.

‘ಕಸಾಪ ಚುನಾವಣೆಯಲ್ಲಿ ನೇರ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ’ ಎಂದರು.

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಜಿಲ್ಲೆಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ’ ಎಂದರು.

ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ ಉದ್ಘಾಟಿಸಿದರು.

ರಾಮಚಂದ್ರ ಗಣಾಪೂರ, ರಾಜಕುಮಾರ ಅಲ್ಲೂರೆ, ಉಷಾರಾಣಿ ಮಂಡ್ಯ, ಎ.ಕೆ. ರಾಮೇಶ್ವರ, ಮಂಜುಳಾ ಅಕ್ಕಿ , ಮಲ್ಲಮ್ಮ ಪಾಟೀಲ, ವಿವೇಕಾನಂದ ಇಂಗಳಗಿಕರ್, ಸಂತೋಷ ರಾಯ್ಕರ್, ಸುಧಾ ಹಿರೇಮಠ, ಭೀಮರಾವ್ ಬಿರಾದಾರ, ಮಲ್ಲಪ್ಪ ಗೌಡ, ಸುಷ್ಮಿತಾ ಮೋರೆ, ಬುದ್ದದೇವಿ, ಸುನೀತಾ ದಾಡಗೆ, ಸಾರಿಕಾ ಗಂಗಾ, ಬಸಮ್ಮ ಗಂಗನಳ್ಳಿ, ಪ್ರಸಾದ ಚಂದ್ರಕಾಂತ ರೇವಣಕರ್, ರವೀಶ್ ಚಿಕ್ಕಮಗಳೂರು, ಶೇಷಪ್ಪ ಎನ್. ಸಿ, ವರುಣಕುಮಾರ ಧವನಿ, ಕಸ್ತೂರಿ ದಳವಾಯಿ, ಗಂಗಾದೆವಿ ಬಿಲಗುಂದೆ, ಶಿವಾ ಜೈಸಿಂಗ್ ಪವಾರ್, ಗೌತಮ ಭೋಸ್ಲೆ, ಮಲ್ಲಿಕಾರ್ಜುನ ಮೊಳಕೆರೆ, ಸತೀಶ ವಗ್ಗೆ, ಸೂರ್ಯಕಾಂತ ಎಕಲಾರ, ಗಣಪತರಾವ್ ವಾಸುದೇವ, ಪ್ರಭು ಶೆಂಬೆಳ್ಳಿ, ರಾಜಕುಮಾರ ರಕ್ಷಾಳ, ಕಂಟೆಪ್ಪ ಗುಪ್ತಾ, ಕಂಟೆಪ್ಪ ಚಿಂತಾಕಿ, ಪರಮೇಶ್ವರ ವಿಳಾಸಪೂರೆ, ಪ್ರೇಮಕುಮಾರ ಕಾಂಬಳೆ, ಅಶೋಕ ವಗ್ಗೆ, ಶಿವಲಿಂಗಪ್ಪ ಪಾಟೀಲ, ಶ್ರೀಕಾಂತ ಪಾಟೀಲ, ರಾಜೇಂದ್ರ ರಾಠೋಡ್, ಶಿವಕಾಂತ ಹಾರೂರಗೇರಿಕರ್, ಪ್ರಶಾಂತ ಭಾವಿಕಟ್ಟಿ, ಶಿವರಾಜ ಜಮಿಸ್ತಾನಪೂರ, ಸಾರಿಕಾ, ಸುನೀತಾ ಪಾಟೀಲ, ರಾಜಶೇಖರ ಮಾಲಿಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಔರಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜೈಶೀಲಾ ಬಿ, ಸಾಹಿತಿ ಸಂಜುಕುಮಾರ ಅತಿವಾಳ, ಶಶಿಕುಮಾರ ಪೋಲೀಸ್ ಪಾಟೀಲ, ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮುಕೇಶ ಶಹಾಗಂಹ್ ಇದ್ದರು.

ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು