ಔರಾದ್ (ಬೀದರ್ ಜಿಲ್ಲೆ): ಬೀದರ್ ಕಡೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಮಧ್ಯಾಹ್ನ ಡೀಸೆಲ್ ಟ್ಯಾಂಕ್ ಸೋರಿಕೆಯಾಗಿ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಔರಾದ್ನಿಂದ ಮುಗಳಖೋಡ್ ಹೋಗುತ್ತಿದ್ದ ಬಸ್ ಮುಸ್ತಾಪೂರ ಸಮೀಪ ಬರುತ್ತಿದ್ದಂತೆ ಡೀಸೆಲ್ ಟ್ಯಾಂಕ್ನಿಂದ ಸೋರಿಕೆಯಾಗಿದೆ. ಇದನ್ನು ಗಮನಿಸಿದ ಚಾಲಕ ಅಶೋಕ ಭಾಲ್ಕೆ ತಕ್ಷಣ ಇಂಜಿನ್ ಆಫ್ ಮಾಡಿದ್ದಾರೆ. ಕೆಳಗಿಳಿದು ಸೋರಿಕೆಯಾಗುತ್ತಿದ್ದ ಸ್ಥಳದಲ್ಲಿ ಬಟ್ಟೆ ಹಿಡಿದು ತಡೆದಿದ್ದಾರೆ. ವಿಷಯನ್ನು ಘಟಕ ವ್ಯವಸ್ಥಾಪಕರಿಗೆ ಮುಟ್ಟಿಸಿದಾಗ ಮೆಕ್ಯಾನಿಕ್ ಅವರನ್ನು ಸ್ಥಳಕ್ಕೆ ಕಳುಹಿಸಿ ಟ್ಯಾಂಕ್ನಲ್ಲಿದ್ದ 200 ಲೀಟರ್ ಡೀಸೆಲ್ ಹೊರ ತೆಗೆದು ಅನಾಹುತ ತಪ್ಪಿಸಿದ್ದಾರೆ.

ಔರಾದ್ನಿಂದ ಮೆಕ್ಯಾನಿಕ್ ಬರುವ ತನಕ ಚಾಲಕ ಅಶೋಕ ಭಾಲ್ಕೆ ಸೋರಿಕೆ ಸ್ಥಳದಲ್ಲಿ ಬಟ್ಟೆಯಿಂದ ಕೈ ಹಾಗೆಯೇ ಒತ್ತಿ ಹಿಡಿದು ಡೀಸೆಲ್ ಹೊರ ಬರದಂತೆ ನೋಡಿಕೊಂಡಿದ್ದು, ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆಗೆ ಪ್ರಯಾಣಿಕರು ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಸೇಲ್ ಸೋರಿಕೆಯಾದ ಬಸ್ನಲ್ಲಿ 40 ಪ್ರಯಾಣಿಕರಿದ್ದು, ಅವರೆಲ್ಲರನ್ನೂ ಬೇರೆ ಬಸ್ ಹತ್ತಿಸಿ ಕಳುಹಿಸಲಾಗಿದೆ. ಮುಗಳಖೇಡ್ಗಡೆ ಮತ್ತೊಂದು ಬಸ್ ಕಳಹಿಸಿಕೊಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ರಾಜಶೇಖರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.