ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕ, ದಾಸೋಹ ತತ್ವ ಈಗಲೂ ಪ್ರಸ್ತುತ’

Published 13 ಫೆಬ್ರುವರಿ 2024, 8:44 IST
Last Updated 13 ಫೆಬ್ರುವರಿ 2024, 8:44 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೀದರ್‌: ‘12ನೇ ಶತಮಾನದ ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳು ಈಗಲೂ ಪ್ರಸ್ತುತ, ಮುಂದೆಯೂ ಪ್ರಸ್ತುತವಾಗಿರುತ್ತವೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜ ಕುಮಾರ ಕುಲಕರ್ಣಿ ಅಭಿಪ್ರಾಯ ಪಟ್ಟರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ 160ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಗಣೇಶ ಅಮೀನಗಡ ರಚಿತ ‘ಕೌದಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಸಂಪಾದಿಸಿದ ಆದಾಯದ ಮೇಲೆ ಸರ್ಕಾರವು ಕರ ಹೇರಿ, ಅದರಿಂದ ಸಂಗ್ರಹವಾದ ಹಣವನ್ನು ಸರ್ಕಾರ ವಿವಿಧ ಕ್ಷೇತ್ರದ ಪ್ರಗತಿಗಾಗಿ ಉಪಯೋಗ ಮಾಡುವ ಉದ್ದೇಶ ಹೊಂದಿದೆ. ಈ ಹಿನ್ನಲೆಯಲ್ಲಿ ಬಸವಾದಿ ಶರಣರು ಕೊಟ್ಟಂತಹ ಕಾಯಕ, ದಾಸೋಹ ತತ್ವ ಸಿದ್ಧಾಂತವು 21ನೇ ಶತಮಾನದಲ್ಲೂ ಪ್ರಸ್ತುತವಾಗಿರುವುದು ಗೊತ್ತಾಗುತ್ತದೆ ಎಂದರು.

ಮಾತೆ ಮಾಣಿಕೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಲೋಕೇಶ ಉಡಬಾಳೆ ಮಾತನಾಡಿ, ಬಸವಾದಿ ಶರಣರು ಸಕಲ ಜೀವಿಗಳ ಕಲ್ಯಾಣ ಬಯಸುವ ತತ್ವಗಳನ್ನು ಕೊಟ್ಟಿದ್ದಾರೆ. ಅವುಗಳು ಆಚರಣೆಗೆ ಬರಬೇಕಿದೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ, ಕೌದಿ ನಾಟಕದಲ್ಲಿ ಭಾಗ್ಯಶ್ರೀ ಪಾರಾ ಅವರು ಅದರ ಮಹತ್ವ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭಾರತೀಯ ಜಾನಪದ ಸಂಸ್ಕೃತಿಯಲ್ಲಿ ಕೌದಿಗೆ ವಿಶೇಷ ಮಹತ್ವ ಇದೆ. ಕೌದಿಯನ್ನು ಎಲ್ಲಾ ಕಾಲದಲ್ಲೂ ಬಳಸಬಹುದಾಗಿದೆ. ಈ ನಾಟಕ ಸೌಹಾರ್ದದ ಪ್ರತೀಕವೂ ಹೌದು ಎಂದು ತಿಳಿಸಿದರು.

ಮಹಾಲಿಂಗ ಸ್ವಾಮೀಜಿ, ಪ್ರೊ.ಎಸ್.ಬಿ.ಬಿರಾದಾರ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕಲಾವಿದ ವಿಜಯಕುಮಾರ ಸೋನಾರೆ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕ ಸುರ್ವಣಾ ಚಿಮಕೋಡೆ, ಶಂಕರರಾವ ಚಲವಾ, ನಾಗಮಣಿ ಪ್ರಕಾಶ ಪಾಟೀಲ, ರೇಣುಕಾ, ಅಕ್ಷತಾ, ವಚನಶ್ರೀ ಚನ್ನಬಸವ ನೌಬಾದೆ, ಪ್ರೊ. ಉಮಾಕಾಂತ ಮೀಸೆ, ವಿಜಯಲಕ್ಷ್ಮಿ ಹುಗ್ಗೇಳಿ, ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ಶ್ರೀಕಾಂತ ಸ್ವಾಮಿ, ಶರಣಪ್ಪ ಚಿಮಕೋಡೆ, ಗುರುನಾಥ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಮೀನಾಕ್ಷಿ ಪಾಟೀಲ, ಕಸ್ತೂರಬಾಯಿ ಬಿರಾದಾರ, ಲಕ್ಷ್ಮಿ ಬಿರಾದಾರ, ಲಕ್ಷ್ಮಿಬಾಯಿ ಮಾಳಗೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT