ಸೋಮವಾರ, ಜನವರಿ 18, 2021
22 °C

ಬೀದರ್‌: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ನಗರದ ಜನವಾಡ ವಾಟರ್ ಟ್ಯಾಂಕ್ ಸಮೀಪ ಬಸ್‌ ತಂಗುದಾಣದ ಎದುರು ಸೋಮವಾರ ರಾತ್ರಿ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ಕೊಲೆಯಾದವರನ್ನು ಔರಾದ್‌ ತಾಲ್ಲೂಕಿನ ಚಿಂತಾಕಿಯ ಸೆಂಟ್ರಿಂಗ್‌ ಕೆಲಸಗಾರ ಎಲ್ಸನ್ ಮಾದಪ್ಪ(25) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ 6 ಗಂಟೆಗೆ ತೆಲಂಗಾಣದ ಸಂಗಾರೆಡ್ಡಿಯಿಂದ ಹೊರಟು ರಾತ್ರಿ ಬೀದರ್‌ಗೆ ಬಂದಿದ್ದರು. ಜನವಾಡ ರಸ್ತೆಯಲ್ಲಿರುವ ಬಸ್‌ ತಂದುದಾಣದ ಬಳಿ ಊರಿಗೆ ಹೋಗಲು ಔರಾದ್‌ ಕಡೆಗೆ ಹೋಗುವ ಬಸ್‌ಗಾಗಿ ಕಾದು ನಿಂತಿದ್ದರು ಎನ್ನಲಾಗಿದೆ. ಅಪರಿಚಿತರು ಕಲ್ಲು ಎತ್ತು ಹಾಕಿಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ನ್ಯೂಟೌನ್‌ ಪಿಎಸ್‌ಐ ಸಂತೋಷ ಎಲ್‌.ಟಿ. ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು