ಭಾಲ್ಕಿ: ಮಲ್ಲಣ್ಣ ದೇವರ ಜಾತ್ರೆ ಆರಂಭ; ಹರಿದು ಬಂದ ಭಕ್ತ ಸಾಗರ
ಹರಿದು ಬಂದ ಭಕ್ತ ಸಾಗರ: ಭಕ್ತರು, ವ್ಯಾಪಾರಿಗಳಲ್ಲಿ ಮನೆ ಮಾಡಿದ ಸಂಭ್ರಮ
ಬಸವರಾಜ್ ಎಸ್.ಪ್ರಭಾ
Published : 1 ಡಿಸೆಂಬರ್ 2025, 5:05 IST
Last Updated : 1 ಡಿಸೆಂಬರ್ 2025, 5:05 IST
ಫಾಲೋ ಮಾಡಿ
Comments
ಭಾಲ್ಕಿ ತಾಲ್ಲೂಕಿನ ಖಾನಾಪೂರದ ಮೈಲಾರ ಮಲ್ಲಣ್ಣ ದೇವರ ಜಾತ್ರೆಯ ಮೊದಲ ಭಾನುವಾರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
ದೇವಸ್ಥಾನ ಪಕ್ಕದ ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡುತ್ತಿರುವ ಭಕ್ತರು
ಭಕ್ತರಿಗಾಗಿ ವಸತಿ ಪ್ರಸಾದ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಒಂದು ತಿಂಗಳ ಜಾತ್ರೆಯಲ್ಲಿ ಸುಮಾರು 5 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ
ಸಂಜು ದೇವಸ್ಥಾನ ವ್ಯವಸ್ಥಾಪಕ
ಮಲ್ಲಣ್ಣ ದೇವರ ಜಾತ್ರೆ ಭಕ್ತರಲ್ಲಿ ಧಾರ್ಮಿಕ ಚೈತನ್ಯ ತುಂಬುವುದರ ಜೊತೆಗೆ ಸಣ್ಣಪುಟ್ಟ ವ್ಯಾಪಾರಿಗಳ ಮೊಗದಲ್ಲಿ ಹರ್ಷ ಮೂಡಿಸುತ್ತದೆ. ಜಾತ್ರೆ ವ್ಯಾಪಾರಿಗಳ ಆರ್ಥಿಕ ಚೈತನ್ಯಕ್ಕೆ ತುಂಬಾ ಸಹಾಯಕವಾಗಿದೆ