ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಕ್ಕಸ ಖಾಲಿ-ಕಾಂಗ್ರೆಸ್ ಸಾಧನೆ: ಮಲ್ಲಿಕಾರ್ಜುನ ಪಾಟೀಲ

Published 20 ಮೇ 2024, 16:12 IST
Last Updated 20 ಮೇ 2024, 16:12 IST
ಅಕ್ಷರ ಗಾತ್ರ

ಚಿಟಗುಪ್ಪ: ’ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಖಾಲಿ ಮಾಡುತ್ತಿದೆ' ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸೋಮವಾರ ವಿಧಾನ ಪರಿಷತ್ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ‌ ಮತಯಾಚಿಸಿ ಮಾತನಾಡಿದರು.

ಅಧಿಕಾರದ ಆಸೆಗಾಗಿ ಅಭಿವೃದ್ಧಿಯಿಂದ‌ ದೂರವುಳಿದ ಕಾಂಗ್ರೆಸ್ ಲೋಕಸಭಾ ಚುನಾವಣೆ ಫಲಿತಾಂಶದ‌ ನಂತರ‌ ದಿವಾಳಿಯಾಗಲಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತದಿಂದ‌ ವಿಜಯ ಸಾಧಿಸಲಿದ್ದಾರೆ‌ ಎಂದರು.

ರಾಜಗೋಪಾಲ್ ಐನಾಪುರ, ಸಚಿನ ಮಠಪತಿ,ಶಾಮರಾವ್ ಭೂತಾಳೆ,ಪರಮೇಶ‌ ಬಬಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT