ಬೀದರ್: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ’ನೆಟ್ವರ್ಕ್‘ ಸಿಗದ ಕಾರಣ ಮರ ಹಾಗೂ ನೀರಿನ ಟ್ಯಾಂಕ್ ಏರಿದ ಸಮೀಕ್ಷಕರಿಬ್ಬರಿಗೆ ಗುರುವಾರ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಹುಲಸೂರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದ ಮಹಾರಾಜ ಹಾಗೂ ಹಂದ್ರಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅನೀಲಕುಮಾರ ಶಾಸ್ತ್ರಿ ಅವರಿಗೆ ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ನೀಡಿದ್ದಾರೆ. ಕ್ರಮವಾಗಿ ಇಬ್ಬರು ಬುಧವಾರ ಮರ ಹಾಗೂ ನೀರಿನ ಟ್ಯಾಂಕ್ ಹತ್ತಿದ್ದರು.

‘ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ವರ್ತಿಸಿ, ಸರ್ಕಾರದ ನೀತಿಯನ್ನು ಅಣಕಿಸಿ ಸರ್ಕಾರಿ ನೌಕರರಲ್ಲದ ರೀತಿ ವರ್ತಿಸಿ ನೆಟ್ವರ್ಕ್ಗಾಗಿ ಮರ ಹಾಗೂ ನೀರಿನ ಟ್ಯಾಂಕ್ ಹತ್ತಿ ಆ ಚಿತ್ರಗಳನ್ನು ಹಂಚಿಕೊಂಡಿದ್ದೀರಿ. ಮೂರು ದಿನಗಳ ಒಳಗೆ ಲಿಖಿತ ಹೇಳಿಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.