ಸೋಮವಾರ, ಏಪ್ರಿಲ್ 19, 2021
32 °C
ಶರಣ ಉದ್ಯಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಹೊಸ ವರ್ಷಕ್ಕೆ ಕೇಕ್‌, ನೃತ್ಯ, ಗಾಯನದ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: 2020 ಹೊಸ ವರ್ಷವನ್ನು ಜಿಲ್ಲೆಯ ಜನ ಮಂಗಳವಾರ ವಿವಿಧ ಕಾರ್ಯಕ್ರಮಗಳ ಮೂಲಕ ವಿಭಿನ್ನವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಅನೇಕರು ಕೇಕ್ ಕತ್ತರಿಸಿ ಹೊಸ ವರ್ಷದ ಸಂಭ್ರಮ ಆಚರಿಸಿದರೆ, ನಗರದ ಶರಣ ಉದ್ಯಾನದಲ್ಲಿ ಅಕ್ಕ ಅನ್ನಪೂರ್ಣ ಅವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.

ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಿಕ್ಕಪೇಟೆಯ ರಸ್ತೆಯಲ್ಲಿರುವ ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಹೊಸ ವರ್ಷದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು.

ವಿವಿಧೆಡೆ ಯುವಕರು ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ, ನೃತ್ಯ, ಗಾಯನದೊಂದಿಗೆ ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿದರು. ಕೆಲವರು ‘ಪಾರ್ಟಿ’ ಮಾಡಿ ಹೊಸ ವರ್ಷ ಆಚರಿಸಿದರು.

ನಗರದ ಹೊಸ ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತ, ಹರಳಯ್ಯ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರು ಕ್ರಾಸ್, ಗುಂಪಾ, ಓಲ್ಡ್‌ಸಿಟಿ, ಶಿವನಗರ ಸೇರಿದಂತೆ ವಿವಿಧೆಡೆ ಹೊಸ ವರ್ಷದ ಪ್ರಯುಕ್ತ ಹ್ಯಾಲಿ ನ್ಯೂ ಇಯರ್‌ 2020 ಎಂದು ಬರೆಯಲಾಗಿದ್ದ ಬಗೆ ಬಗೆಯ ಕೇಕ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೆಜಿಗೆ ₹250, 400, ₹500, ₹800, ₹1,000 ವರೆಗಿನ ಸ್ಟ್ರಾಬೆರಿ, ಪೈನಾಪಲ್, ವೆನಿಲಾ, ಬ್ಲ್ಯಾಕ್ ಫಾರೆಸ್ಟ್ ಸೇರಿ ವಿವಿಧ ಪ್ರಕಾರದ ಕೇಕ್‌ಗಳೂ ಮಾರಾಟಕ್ಕೆ ಇದ್ದವು.

ಕೆಲವರು ಮುಂಚಿತವಾಗಿ ಆರ್ಡರ್ ಕೊಟ್ಟು ಕೇಕ್ ಖರೀದಿಸಿದ್ದಾರೆ. ಬಹುತೇಕರು ಅಂಗಡಿಗಳಲ್ಲಿ ಸಿದ್ಧಪಡಿಸಿ ಇಟ್ಟಿದ್ದ ಕೇಕ್‌ಗಳನ್ನು ಖರೀದಿಸಿಕೊಂಡು ಹೋಗಿದ್ದಾರೆ ಎಂದು ಬೇಕರಿಯೊಂದರ ಮಾಲೀಕ ಚಂದ್ರಕಾಂತ ಬಾಬಶೆಟ್ಟೆ.

ಪೊಲೀಸ್ ಬಂದೋಬಸ್ತ್

ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಂದೋಬಸ್ತ್‌ಗೆ 4 ಡಿವೈಎಸ್‌ಪಿ, 14 ಸಿಪಿಐ, 39 ಪಿಎಸ್‍ಐ, 1,480 ಪೊಲೀಸ್ ಪೇದೆ, 10 ಡಿಎಆರ್ ತುಕ್ಕಡಿ, 9 ಹೆದ್ದಾರಿ ಗಸ್ತು ವಾಹನ ಹಾಗೂ 2 ಕ್ಯೂಆರ್‌ಟಿ ತಂಡಗಳನ್ನು ನಿಯೋಜಿಸಲಾಗಿತ್ತು.

ಮದ್ಯ ಸೇವಿಸಿ ವಾಹನ ಚಲಾಯಿಸುವವರ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು