ಇಂದಿನ ದಿನಗಳಲ್ಲಿ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದು ಕಷ್ಟ. ಪತ್ರಿಕಾ ಏಜೆಂಟರು ಹಾಗೂ ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ಉನ್ನತ ಶಿಕ್ಷಣಕ್ಕೂ ನೆರವು ನೀಡಬೇಕು.ರಾಕೇಶ್ ಪತ್ರಿಕಾ ವಿತರಕ ಹೌಸಿಂಗ್ ಬೋರ್ಡ್ ಕಾಲೊನಿ ಬೀದರ್
ಇಡೀ ಜಗತ್ತಿನಲ್ಲಿ ಆಗುವ ಮಾಹಿತಿಯನ್ನು ಪತ್ರಿಕೆಗಳನ್ನು ತಲುಪಿಸುವ ಮೂಲಕ ಜನರ ಜ್ಞಾನ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನಮ್ಮ ಕಲ್ಯಾಣಕ್ಕೂ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಬೇಕು. ನಮ್ಮನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು.ಸಂತೋಷ್ ಪತ್ರಿಕಾ ವಿತರಕ ನಂದಿ ಕಾಲೊನಿ ಬೀದರ್
ಪತ್ರಿಕಾ ಏಜೆಂಟರು ಹಾಗೂ ವಿತರಕರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಬೇಕು. ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ಮಕ್ಕಳ ಓದಿಗೆ ಅನುಕೂಲ ಶೈಕ್ಷಣಿಕ ಸಾಲ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆ ಖರೀದಿಸಲು ಸರ್ಕಾರ ಅನುಕೂಲ ಮಾಡಿಕೊಡಬೇಕು.ಗಣೇಶ್ ಪತ್ರಿಕಾ ವಿತರಕ ಶಿವನಗರ ಬೀದರ್
ಪ್ರತಿದಿನ ತಪ್ಪದೇ ನಮ್ಮ ನೆಚ್ಚಿನ ಓದುಗರಿಗೆ ಎಲ್ಲ ಕಾಲದಲ್ಲೂ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ತಲುಪಿಸುವ ಕಾಯಕ ಮಾಡುತ್ತೇವೆ. ಎಲ್ಲ ಓದುಗರು ಸರಿಯಾದ ಸಮಯಕ್ಕೆ ಪತ್ರಿಕೆಗಳ ಹಣ ಪಾವತಿಸಿ ಸಹಕರಿಸಬೇಕು. ಸರ್ಕಾರವೂ ಪತ್ರಿಕಾ ವಿತರಕರ ಬಾಳನ್ನು ಬೆಳಗಲು ವಿವಿಧ ಯೋಜನೆಗಳನ್ನು ರೂಪಿಸಬೇಕು.ಶಫಿಯುದ್ದೀನ್ ಪತ್ರಿಕಾ ವಿತರಕ ಭಾತಂಬ್ರಾ
ಗೌರವಧನ ನೀಡಬೇಕು ಓದುಗರಿಗೆ ಸರಿಯಾದ ಸಮಯಕ್ಕೆ ಪತ್ರಿಕೆಗಳು ತಲುಪಬೇಕು ಎಂದು ಗಾಳಿ ಮಳೆ ಬಿಸಿಲು ಕತ್ತಲು ಸೇರಿದಂತೆ ಎಲ್ಲ ಸಮಯದಲ್ಲಿಯೂ ನಸುಕಿನ ಜಾವದಲ್ಲಿಯೇ ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುತ್ತೇವೆ. ಹಾಗಾಗಿ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ ಪ್ರತಿ ತಿಂಗಳು ಗೌರವ ಧನ ನೀಡಬೇಕುರಾಜಗುರು ಪತ್ರಿಕಾ ವಿತರಕ ಭಾಲ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.