ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಈರುಳ್ಳಿ ₹100ಗೆ 10 ಕೆ.ಜಿ

ತರಕಾರಿ ಮಾರುಕಟ್ಟೆಯಲ್ಲಿ ಶತಕ ಬಾರಿಸಿದ ಬೆಂಡೆಕಾಯಿ
Last Updated 10 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಬೀದರ್: ಮಹಾರಾಷ್ಟ್ರದ ನಾಸಿಕ್‌ನಿಂದ ಕಳೆದ ವಾರ ಹಸಿ ಈರುಳ್ಳಿ ಭಾರಿ ಪ್ರಮಾಣದಲ್ಲಿ ಆವಕವಾಗಿದೆ. ಈ ವಾರ ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಇನ್ನೂ ಹಸಿಯಾಗಿದೆ. ಹೀಗಾಗಿ ಬೆಲೆ ಕಡಿಮೆ ಇದೆ. ವ್ಯಾಪಾರಸ್ಥರು ₹100ಗೆ ₹10 ಕೆ.ಜಿ. ಈರುಳ್ಳಿ ಕೊಡುತ್ತಿದ್ದಾರೆ. ಕಡಿಮೆ ಗುಣಮಟ್ಟದ, ಸಣ್ಣ ಗಾತ್ರದ ಬೇರು ಒಣಗದ ಈರುಳ್ಳಿ ಪ್ರತಿ ಕೆ.ಜಿ. ₹ 8ರಂತೆಯೂ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ, ಆಲೂಗಡ್ಡೆ, ಡೊಣಮೆಣಸಿನ ಕಾಯಿ, ಚವಳೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್, ಟೊಮೆಟೊ, ಬದನೆಕಾಯಿ, ಹಿರೇಕಾಯಿ, ನುಗ್ಗೆಕಾಯಿ, ಮೆಂತೆ, ಸಬ್ಬಸಗಿ, ಕರಿಬೇವು, ಕೊತಂಬರಿ, ಪಾಲಕ್ ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ಮೆಣಸಿನಕಾಯಿ ಬೆಲೆ ₹ 2 ಸಾವಿರ ಹೆಚ್ಚಾಗಿದೆ. ಒಣಗಿದ ಮೆಣಸಿನಕಾಯಿಗೂ ಬೇಡಿಕೆ ಹೆಚ್ಚಿದೆ. ಹೀಗಾಗಿ ರೈತರು ಹೊಲಗಳಲ್ಲಿ ಮೆಣಸಿನಕಾಯಿ ಹಣ್ಣಾಗಲು ಬಿಟ್ಟಿದ್ದಾರೆ. ಕಾರಣ ಸಹಜವಾಗಿಯೇ ಬೆಲೆ ಏರಿದೆ. ಒಣ ಮೆಣಸಿನಕಾಯಿ ಬೆಲೆ ತಿಂಗಳಿಂದ ಸ್ಥಿರವಾಗಿದೆ.

ಮಾರುಕಟ್ಟೆಯಲ್ಲಿ ಬೆಂಡೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ನಾಲ್ಕು ಸಾವಿರ ಹೆಚ್ಚಾಗಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಈರುಳ್ಳಿ, ಹಿರೇಕಾಯಿ, ಪಡವಲಕಾಯಿ ಹಾಗೂ ನುಗ್ಗೆಕಾಯಿ ಬೆಲೆಯಲ್ಲಿ ಏರಿಳಿತ ಅಧಿಕ. ಈ ವಾರ ತರಕಾರಿ ಮಾರುಕಟ್ಟೆಯಲ್ಲಿ ಬೆಂಡೆಕಾಯಿ ಸಹ ಚೆಲುವು ಬೀರಿದೆ.

ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್, ಚವಳೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ನುಗ್ಗೆಕಾಯಿ, ಮೆಂತೆ, ಸಬ್ಬಸಗಿ, ಕರಿಬೇವು ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ಡೊಣಮೆಣಸಿನ ಕಾಯಿ, ತುಪ್ಪದ ಹಿರೇಕಾಯಿ ಬೆಲೆ ₹ 2 ಸಾವಿರ, ಬದನೆಕಾಯಿ, ಕೊತಂಬರಿ, ಪಾಲಕ್ ₹ 1 ಸಾವಿರ ಹಾಗೂ ಈರುಳ್ಳಿ ಬೆಲೆ ₹ 500 ಕಡಿಮೆಯಾಗಿದೆ.

ಮಹಾರಾಷ್ಟ್ರದ ನಾಸಿಕ್, ಸೋಲಾಪುರ ಹಾಗೂ ಜಾಲನಾದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೆಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ದೂರದ ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ.

‘ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಪುಂಡಿ, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

****

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

(ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ)

ಈರುಳ್ಳಿ 10-15, 5-10
ಬೆಳ್ಳುಳ್ಳಿ 50-60, 50-60
ಆಲೂಗಡ್ಡೆ 10-20, 10-20
ಮೆಣಸಿನಕಾಯಿ 50-60, 60-80
ಎಲೆಕೋಸು 10-20, 10-20
ಹೂಕೋಸು 30-40, 30-40
ಗಜ್ಜರಿ 30-40, 30-40
ಬೀನ್ಸ್ 60-80, 60-80
ಟೊಮೆಟೊ 10-20, 10-20

ಬದನೆಕಾಯಿ 30-40, 30-40
ಬೆಂಡೆಕಾಯಿ 60-80, 100-120
ಹಿರೇಕಾಯಿ 60-80, 60-80
ನುಗ್ಗೆಕಾಯಿ 60-80, 60-80

ಡೊಣಮೆಣಸಿನ ಕಾಯಿ 50-60, 50-60
ಚವಳೆಕಾಯಿ 60-80, 60-80
ಸೌತೆಕಾಯಿ 30-40, 30-40
ತುಪ್ಪದ ಹಿರೇಕಾಯಿ 60-80, 60-80

ಮೆಂತೆ 20-30,20-30
ಸಬ್ಬಸಗಿ 60-80, 60-80
ಕರಿಬೇವು 100-120, 100-120
ಕೊತಂಬರಿ 10-20, 10-20
ಪಾಲಕ್ 30-40, 30-40

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
.....................................................
ಕಡಲೆ ಕಾಳು – ₹ 4,000- ₹4,780
ಅವರೆಕಾಯಿ - ₹ 4,400- ₹6,000
ಜೋಳ ₹ 3,000- ₹5,000
ನುಚ್ಚು ಅಕ್ಕಿ ₹ 2,400- ₹2,800

ಅಕ್ಕಿ ₹ 4,400- ₹6,000
ಸೋಯಾಬಿನ್ ₹ 4,800- ₹5,100
ಗೋಧಿ ₹ 2,300- ₹3,300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT