ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ಇನ್ನೆರಡು ದಿನ ಮಳೆ

Published 29 ನವೆಂಬರ್ 2023, 4:11 IST
Last Updated 29 ನವೆಂಬರ್ 2023, 4:11 IST
ಅಕ್ಷರ ಗಾತ್ರ

ಬೀದರ್: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ.

ರಾತ್ರಿ 9.30ರ ಸುಮಾರಿಗೆ ಆರಂಭಗೊಂಡಿದ್ದ ಮಳೆ ತಡರಾತ್ರಿ ವರೆಗೆ ಸುರಿದಿದೆ. ಬುಧವಾರ ಬೆಳಗಿನ ಜಾವ ಕೂಡ ತುಂತುರು ಮಳೆಯಾಗಿದೆ. ಕಾರ್ಮೋಡ ಕವಿದಿದ್ದು, ತಂಗಾಳಿ ಬೀಸುತ್ತಿದೆ. ಚಳಿಯ ಪ್ರಮಾಣ ಹೆಚ್ಚಾಗಿದೆ.

ಬಿರುಸಿನ ಮಳೆಗೆ ನಗರದ ವಿದ್ಯಾನಗರ, ಶಿವನಗರ, ಚೌಬಾರ, ಬಸವನಗರ, ಹಾರೂರಗೇರಿ, ಲಾಡಗೇರಿಯಲ್ಲಿ ಅಪಾರ ನೀರು ಸಂಗ್ರಹಗೊಂಡಿದೆ.

ಜಿಲ್ಲೆಯ ಹುಮನಾಬಾದ್, ಬೀದರ್, ಕಮಲನಗರ, ಔರಾದ್ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಇನ್ನೆರೆಡು ದಿನ ಮಳೆಯಾಗಲಿದೆ ಎಂದು ಹವಾಮಾನ‌ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT