ಬೀದರ್: ಲೋಕ ಜನಶಕ್ತಿ ಪಕ್ಷದಿಂದ ನಗರದಲ್ಲಿ ಮಂಗಳವಾರ ಮಾಜಿ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ 4ನೇ ಪುಣ್ಯತಿಥಿ ಕಾರ್ಯಕ್ರಮ ಆಚರಿಸಲಾಯಿತು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಾಗಶೆಟ್ಟಿ ಪಾಟೀಲ ಸುಂಕನಾಳ ಮಾತನಾಡಿ, ಪಾಸ್ವಾನ್ ಅವರು ದೇಶ ಕಂಡ ಅಪರೂಪದ ಧೀಮಂತ ನಾಯಕರಾಗಿದ್ದರು. ದೀನ ದಲಿತರ, ನೋಂದ ಜನರ ಏಳಿಗೆಗಾಗಿ ಬದುಕು ಸವೆಸಿದ್ದರು. ಅಸಂಖ್ಯ ಬೆಂಬಲಿಗರನ್ನು ಹೊಂದಿದ್ದರು ಎಂದು ಹೇಳಿದರು.

ಸಾಹಿತಿ ರಮೇಶ ಬಿರಾದಾರ ಮಾತನಾಡಿ, ಪಾಸ್ವಾನ್ ಅವರು ರೈಲ್ವೆ ಸಚಿವರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕಾರ್ಮಿಕ, ರಾಸಾಯನಿಕ ಮಂತ್ರಿಗಳಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.

ಇದಕ್ಕೂ ಮುನ್ನ ಎರಡು ನಿಮಿಷ ಮೌನ ಆಚರಿಸಿ ಪಾಸ್ವಾನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ರಾಕೇಶ ಕುಲಕರ್ಣಿ, ಔರಾದ್ ತಾಲ್ಲೂಕು ಅಧ್ಯಕ್ಷ ರಾಜಪ್ಪ ದೇಗಲವಾಡೆ ಕೊಳ್ಳೂರು, ಉಪಾಧ್ಯಕ್ಷ ಭರತ ಪೋಕಳವಾರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅನ್ವರ್ ಷಾ, ಉಪಾಧ್ಯಕ್ಷ ಜಾನ್ ನಾಗೋರಕರ್, ಪ್ರವೀಣ ಕುಲಕರ್ಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.