ಭಾನುವಾರ, ಜೂನ್ 26, 2022
22 °C

ದೇವರಿಗಿಂತ ತಾಯಿ-ತಂದೆ ಸೇವೆ ಶ್ರೇಷ್ಠ; ರಾಜೇಶ್ವರ ಶಿವಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಮಕ್ಕಳ ಏಳಿಗೆಯಲ್ಲಿ ಸಾರ್ಥಕತೆ ಕಾಣುವ ತಾಯಿ– ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಅಪರಾಧ ಎಂದು ಕಟ್ಟಿಮನಿ ಹಿರೇಮಠದ ಮೆಹಕರ ಡೋಣಗಾಪುರ ರಾಜೇಶ್ವರ ಶಿವಾಚಾರ್ಯರು ಹೇಳಿದರು.

ಇಲ್ಲಿನ ಕಲ್ಲೇಶ್ವರ ದೇವಾಲಯದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪನಿಗೆ ಕೃತಜ್ಞತೆ ಸಲ್ಲಿಸುವುದೆಂದರೆ ನೀವು ಅಪ್ಪನಾಗಿ ನಿಮ್ಮ ಕರ್ತವ್ಯವನ್ನು ಉತ್ಸಾಹದಿಂದ ಮಾಡಬೇಕು. ತಾಯಿ, ತಂದೆ ಮತ್ತು ಗುರುಗಳನ್ನು ದೇವರ ಸ್ಥಾನದಲ್ಲಿ ಇರಿಸಿ ಪೂಜಿಸಬೇಕು ಎಂದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ–ತಂದೆ ಪಾತ್ರ ಹಿರಿದು. ದೇವರ ಪೂಜೆಗಿಂತಲೂ ಅವರ ಸೇವೆ ಶ್ರೇಷ್ಠ. ಅವರಿಗೆ ಸದಾ ಭಕ್ತಿ, ವಿನಮ್ರತೆಯಿಂದ ತಲೆಬಾಗುವ ಸಂಸ್ಕೃತಿ ನಮ್ಮದು. ಪೋಷಕರು ಬಾಲ್ಯದಲ್ಲಿ ಮಗುವಿಗೆ ಭಾಷೆ, ಸಂಸ್ಕೃತಿ ಕಲಿಸಿ, ಅವರು ಗುರುವಿನ ಸ್ಥಾನದಲ್ಲಿ ನಿಂತು ಕಾರ್ಯ ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಭೀಮಸೇನರಾವ ಸಿಂಧೆ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸ ಬಯಸುವುದು ಧರ್ಮದ ಮೂಲ ಮಂತ್ರ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂದರು.

ಬಿಜೆಪಿ ಮುಖಂಡ ಪ್ರಕಾಶಟೊಣ್ಣೆ ಮಾತನಾಡಿ, ಅಭಿವೃದ್ಧಿ ವಿಚಾರ ದಲ್ಲಿ ಪಕ್ಷಾತೀತ ಇದ್ದರೇ ಸಮಾಜದ ಪ್ರಗತಿ ಸಾಧ್ಯ ಎಂದು ಹೇಳಿದರು.

ಅನ್ನದಾಸೋಹ ಆಯೋಜಿಸಿದ್ದ ಮುಖಂಡ ಜಯಸಿಂಗ ರಾಠೋಡ ಅವರನ್ನು ಸನ್ಮಾನಿಸಲಾಯಿತು.

ದೇವಾಲಯ ಸಮಿತಿ ಅಧ್ಯಕ್ಷ ರಾಜಕುಮಾರ ಬಿರಾದಾರ, ಉಪಾಧ್ಯಕ್ಷ ರಾಜಕುಮಾರ ಸೋಲ್ಲಪುರೆ, ಕಾರ್ಯದರ್ಶಿ ರಾಜಕುಮಾರ ಪೊಲೀಸ್‍ ಪಾಟೀಲ, ವಿಜಯಕುಮಾರ ನಿಟ್ಟೂರೆ, ಪ್ರಕಾಶ ಸೋಲ್ಲಪುರೆ, ಉಮಾಕಾಂತ ಬಿರಾದಾರ, ಸುನೀತಾ ವಿಜಯಕುಮಾರ, ಸುಭಾಷ ಬಿರಾದಾರ, ಮಹಾದೇವ ಮಲ್ಲಿಕಾರ್ಜುನ, ಶಿವಾಜಿ ಪವಾರ, ವಿಶ್ವನಾಥ ಮೇತ್ರೆ, ವಿವೇಕಾಂದ ಮಠಪತಿ, ಶ್ಯಾಮರಾವ ವೈಜನಾಥ, ರಾಮಚಂದ್ರ ರಾಂಪುರೆ, ಸೂರ್ಯಕಾಂತ ಬಿರಾದಾರ, ಮಹಾರಾಷ್ಟ್ರಾದ ಉದಗೀರನ ನಗರ ಸಭೆ ಮಾಜಿ ಅಧ್ಯಕ್ಷ ರಾಜೇಂದ್ರ ನಿಟ್ಟೂರೆ, ವಿಠ್ಠಲರಾವ ಪಾಟೀಲ, ಪ್ರವೀಣ ಪಾಟೀಲ, ಚಂದ್ರಕಾಂತ ಬಿರಾದಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.