ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಹಳೆಯ ಕಟ್ಟಡ ತೆರವುಗೊಳಿಸಿದ ನಂತರ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಜಗದೇವಿ ಭೋಸ್ಲೆ ಪ್ರಾಂಶುಪಾಲರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ
ವಿಳಂಬವೇಕೆ?
ಹಿಂದಿನ ಸಾಲಿನಲ್ಲೇ ಕೆಕೆಆರ್‌ಡಿಬಿಯಿಂದ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಹಳೆಯ ಕಟ್ಟಡದ ತೆರವು ಕಾರ್ಯ ನಡೆಯಬೇಕಾಗಿದೆ. ಹಳೆಯ ಕಟ್ಟಡದಲ್ಲಿ ಸಾಗುವಾನಿ ಮರದ ಬೃಹತ್ ಕಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಅವುಗಳು ಬೆಲೆಬಾಳುವಂತಹವು. ತೆರವಿನ ವೇಳೆ ಅವುಗಳಿಗೆ ಹಾನಿಯಾಗದಂತೆ ತೆಗೆಯಬೇಕಿದೆ. ಇದಕ್ಕಾಗಿ ಇನ್ನಷ್ಟೇ ಟೆಂಡರ್ ಕರೆಯಬೇಕಿದೆ. ಟೆಂಡರ್ ಕರೆಯದ ಕಾರಣ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವಿಳಂಬವಾಗುತ್ತಿದೆ.