ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‍ಟಿ ಸರಳೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 29 ಜನವರಿ 2021, 16:07 IST
ಅಕ್ಷರ ಗಾತ್ರ

ಬೀದರ್: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ನಿಯಮಗಳನ್ನು ಸರಳೀಕರಿಸಬೇಕು ಎಂದು ಆಗ್ರಹಿಸಿ ಡಿಸ್ಟ್ರಿಕ್ಟ್ ಟ್ಯಾಕ್ಸ್ ಪ್ರಾಕ್ಟ್ರೀಷನರ್ಸ್ ಆ್ಯಂಡ್ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ತಹಶೀಲ್ದಾರ್ ಕಚೇರಿ ಪಕ್ಕದ ಜಿಎಸ್‍ಟಿ ಕಚೇರಿ, ಬಾಲ ಭವನ ಸಮೀಪದ ಸೆಂಟ್ರಲ್ ಜಿಎಸ್‍ಟಿ ಕಚೇರಿ ಹಾಗೂ ಗುದಗೆ ಆಸ್ಪತ್ರೆ ಎದುರಿನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಜಿಎಸ್‍ಟಿ ರಿಟರ್ನ್ ಫೈಲ್ ಮಾಡಲು ಹೆಚ್ಚಿನ ಸಮಯ ಕೊಡಬೇಕು. ರಿಟರ್ನ್ ಫೈಲ್ ಮಾಡಿದ ನಂತರ ಪರಿಷ್ಕರಣೆಗೂ ಅವಕಾಶ ಕಲ್ಪಿಸಬೇಕು. ನಿಯಮ 16 ರ ಉಪ ನಿಯಮ 4ನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಡಿಸ್ಟ್ರಿಕ್ಟ್ ಟ್ಯಾಕ್ಸ್ ಪ್ರಾಕ್ಟ್ರೀಷನರ್ಸ್ ಆ್ಯಂಡ್ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸೂರ್ಯಕಾಂತ ಮುಚಳಂಬೆ ನೇತೃತ್ವ ವಹಿಸಿದ್ದರು. ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಅಶೋಕ ಕೋಡಗೆ, ಜಗದೀಶ್ ಡೋಮಲ್, ರವಿಶಂಕರ ಶೆಟ್ಟಿ. ಗಿರೀಶ್ ಜೋಶಿ, ಪಾರ್ವನಾಥ ಜೈನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT