ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವು
Last Updated 12 ಜುಲೈ 2020, 13:59 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಭಾನುವಾರ ಒಟ್ಟು 62 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದ ಓಲ್ಡ್‌ಸಿಟಿಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವುದು ಜನರ ಆತಂಕ ಹೆಚ್ಚಿಸಿದೆ. ವೈರಾಣು ಪೀಡಿತರ ಸಂಖ್ಯೆ ಸಾವಿರ ದಾಟಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೋವಿಡ್‌ 19 ಸೋಂಕಿನಿಂದ ಹೆಚ್ಚು ಜನ ಮೃತಪಟ್ಟ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

ಬೀದರ್‌ ತಾಲ್ಲೂಕಿನಲ್ಲಿ 38, ಬಸವಕಲ್ಯಾಣ ತಾಲ್ಲೂಕಿನಲ್ಲಿ 8, ಹುಮನಾಬಾದ್‌ ತಾಲ್ಲೂಕಿನಲ್ಲಿ 6, ಭಾಲ್ಕಿ ತಾಲ್ಲೂಕಿನಲ್ಲಿ 5 ಹಾಗೂ ಔರಾದ್ ತಾಲ್ಲೂಕಿನಲ್ಲಿ 4 ಜನರಿಗೆ ಸೋಂಕು ತಗುಲಿದೆ.

ಗಾಂಧಿ ಗಂಜ್ ಪೊಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿ, ಸಂಚಾರ ಪೊಲೀಸ್‌ ಠಾಣೆಯ ಒಬ್ಬ ಸಿಬ್ಬಂದಿ, ಡಿಎಚ್‌ಒ ಕಚೇರಿಯ ಒಬ್ಬ ಸಿಬ್ಬಂದಿ, ಬೀದರ್‌ನ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ಬಾಲಕರು, ಸಿದ್ಧಿ ತಾಲೀಂನ ನಾಲ್ವರು ಮಕ್ಕಳ ಸೇರಿ ಒಂಬತ್ತು ಜನರು, ದರ್ಜಿಗಲ್ಲಿ ಹಾಗೂ ದುಲ್ಹನ್‌ ದರ್ವಾಜಾದಲ್ಲಿ ತಲಾ ಇಬ್ಬರಿಗೆ, ಲೇಬರ್ ಕಾಲೊನಿ, ಚೌಬಾರಾದ ಅಂಬಾದಾಸ್‌ಗಲ್ಲಿ,ವಿಜಯಪುರಾದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಬಸವನಗರ ಕಾಲೊನಿಯ ತಲಾ ಮೂವರು ಮಹಿಳೆಯರು ಹಾಗೂ ಪುರುಷರು, ಶಿವನಗರದ ಉತ್ತರ, ಬಾರವಾಡಾ, ಆಶ್ರಯ ಕಾಲೊನಿಯಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಬೀದರ್ ತಾಲ್ಲೂಕಿನ ಬಾಜದೋಗಾ, ಅಷ್ಟೂರ್, ಗುಮ್ಮಾ, ರಾಜೋಳಗಾದ ಒಬ್ಬರಿಗೆ ಸೋಂಕು ತಗುಲಿದೆ.

ಭಾಲ್ಕಿ ತಾಲ್ಲೂಕಿನ ಇಂಚೂರು ಗ್ರಾಮದ 47 ವಷ೯ದ ಪುರುಷ , ಬ್ಯಾಲಹಳ್ಳಿಯ 21 ವಷ೯ದ ಯುವಕ, ಪಟ್ಟಣದ 58 ವಷ೯ದ ಪುರುಷ, ಹಾಲಹಳ್ಳಿ ಕೆ ಗ್ರಾಮದ 25 ವಷ೯ದ ಯುವಕ, ನೀಲಮನಳ್ಳಿಯ 22 ವಷ೯ದ ಯುವತಿ, ಧನ್ನೂರ ಗ್ರಾಮದ 51 ವಷ೯ದ ಪುರುಷ ಸೇರಿದಂತೆ 6 ಜನರಿಗೆ, ಚಿಟಗುಪ್ಪದ 60 ವರ್ಷದ ವೃದ್ಧ ಹಾಗೂ ಮನ್ನಾಎಖ್ಖೆಳ್ಳಿಯ 65 ವರ್ಷದ ಮಹಿಳೆಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಹುಮನಾಬಾದರ್ ತಾಲ್ಲೂಕಿನ ಹಳ್ಳಿಖೇಡ್ (ಬಿ) ಪಟ್ಟಣದ 40 ವರ್ಷದ ಪುರುಷ. ಮತ್ತು ಹುಮನಾಬಾದ್‌ನ ಬಾಲಾಜಿ ಮಂದಿರ ಹತ್ತಿರದ ಬಡಾವಣೆಯ 17 ಮಹಿಳೆ. ಆಶ್ರಯ ಕಾಲೊನಿಯ 27 ಪುರುಷ. ವಾಟರ್ ಟ್ಯಾಂಕ್‌ ಹತ್ತಿರದ 26 ಪುರುಷ ಹಾಗೂ 24 ಮಹಿಳೆಗೆ ಸೋಂಕು ದೃಢ ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT