ಬೀದರ್: ಈಗಾಗಲೇ ಪೂರ್ಣಗೊಂಡು, ತಾಂತ್ರಿಕ ಸಮಿತಿಯ ಅನುಮೋದನೆಯನ್ನೂ ಪಡೆದಿರುವ ಬೀದರ್-ಕಲಬುರ್ಗಿ ಹೊಸ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಿಕಂದರಾಬಾದ್‍ನ ದಕ್ಷಿಣ ಮಧ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಿ.ಜಿ. ಶೆಟಕಾರ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ದಕ್ಷಿಣ ಮಧ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.

ಬೀದರ್-ಯಶವಂತಪುರ ರೈಲನ್ನು (ಸಂಖ್ಯೆ 16571/16572) ಕಲಬುರ್ಗಿ ಮಾರ್ಗವಾಗಿ ಓಡಿಸಬೇಕು. ಬೀದರ್‌ನಿಂದ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಹೊಸ ರೈಲು ಇಲ್ಲವೇ ಈ ನಗರಗಳಿಗೆ ಸಿಂದರಾಬಾದ್, ಹೈದರಾಬಾದ್‍ನಿಂದ ಸಂಚರಿಸುವ ರೈಲುಗಳನ್ನು ಬೀದರ್ ಮಾರ್ಗವಾಗಿ ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೀದರ್–ನವದೆಹಲಿ–ಬೀದರ್ ಹೊಸ ರೈಲು ಸಂಚಾರ ಆರಂಭಿಸಬೇಕು. ಇಲ್ಲವೇ ಸಿಕಂದರಾಬಾದ್, ಹೈದರಾಬಾದ್‍ನಿಂದ ಸಂಚರಿಸುವ ರೈಲುಗಳನ್ನು ಬೀದರ್-ಕಲಬುರ್ಗಿ ಮಾರ್ಗವಾಗಿ ಅಥವಾ ಬೀದರ್-ಲಾತೂರ್ ಮಾರ್ಗವಾಗಿ ಓಡಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.