ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರನ್ನು ಗೌರವದಿಂದ ಕಾಣಿರಿ: ಡಾ.ಆರತಿ ರಘು

ಎಫ್‌ಪಿಐ ಬೀದರ್ ಶಾಖೆಯ ಅಧ್ಯಕ್ಷೆ ಹೇಳಿಕೆ
Last Updated 1 ಜುಲೈ 2021, 14:20 IST
ಅಕ್ಷರ ಗಾತ್ರ

ಬೀದರ್‌: ‘ಕೋವಿಡ್‌ ಸಂದರ್ಭದಲ್ಲೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ವೈದ್ಯರನ್ನು ಗೌರವದಿಂದ ಕಾಣಬೇಕಾಗಿದೆ’ ಎಂದು ಎಫ್‌ಪಿಐ ಬೀದರ್ ಶಾಖೆಯ ಅಧ್ಯಕ್ಷೆ ಡಾ.ಆರತಿ ರಘು ಹೇಳಿದರು.

ನಗರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬೀದರ್‌ ಶಾಖೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿವೆ. ವೈದ್ಯರ ಸೇವೆಯೂ ಸಕಾಲದಲ್ಲಿ ದೊರಕುತ್ತಿದೆ’ ಎಂದು ಹೇಳಿದರು.

ಎಫ್‌ಪಿಐ ಬೀದರ್ ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ‘ಸಂಸ್ಥೆಯ ಸಂಸ್ಥಾಪಕ ಡಾ.ಎಸ್.ಎಸ್. ಸಿದ್ದಾರೆಡ್ಡಿ, ಡಾ.ಕೆ.ಎಲ್. ಕೃಷ್ಣಮೂರ್ತಿ ಸೇವೆಯನ್ನು ಮರೆಯಲಾಗದು’ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಅಂಬುಜಾ ವಿಶ್ವಕರ್ಮ ಮಾತನಾಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷೆ ಡಾ.ವಿಜಯಶ್ರೀ ಬಶೆಟ್ಟಿ, ಗೌರವ ಖಜಾಂಚಿ ಡಾ.ವಿಜಯ ಕೊಂಡಾ, ಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಡಾ.ನಾಗೇಶ ಪಾಟೀಲ, ಡಾ.ಸುಭಾಷ ಬಶೆಟ್ಟಿ, ಡಾ.ರಾಜಶೇಖರ್ ಲಕ್ಕಶೆಟ್ಟಿ, ನಿವೃತ್ತ ವೈದ್ಯಾಧಿಕಾರಿ ಡಾ.ಸಿ.ಎಸ್. ಮಾಲಿಪಾಟೀಲ, ನಿವೃತ್ತ ಡಿಎಚ್‌ಒ ಡಾ.ಮದನಾ ವೈಜಿನಾಥ, ಡಾ.ಎಂ.ಎ. ಶೇರಿಕಾರ, ಡಾ.ವೈಜಿನಾಥ ಬಿರಾದಾರ, ಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಕಾವ್ಯ ಸಿಂಪಿ, ಸುಬ್ರಹ್ಮಣ್ಯ ಪ್ರಭು ಇದ್ದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅವರು ಸಂಸ್ಥೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುಗೆ ನಿರೂಪಿಸಿದರು. ವಿನಾಯಕ ಕುಲಕರ್ಣಿ ವಂದಿಸಿದರು.

‘ವೈದ್ಯರ ಸೇವೆ ಮರೆಯಲಾಗದು’

ಬೀದರ್: ‘ಕೋವಿಡ್‌ ಸಂಕಷ್ಟದಲ್ಲಿ ವೈದ್ಯರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ವೈದ್ಯರ ಸೇವೆಯನ್ನು ನಾಗರಿಕ ಸಮಾಜ ಎಂದಿಗೂ ಮರೆಯದು’ ಎಂದು ಸಾಹಿತಿ ಎಂ.ಜಿ.ದೇಶಪಾಂಡೆ ಹೇಳಿದರು.

ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಅಕ್ಷಾ ವೆಲ್‌ಫೇರ್ ಸೊಸೈಟಿ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ಮದರ್ ತೆರೆಸಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ತಜ್ಞ ಡಾ.ಸಿ. ಆನಂದರಾವ್ ಮಾತನಾಡಿ, ‘ಮನುಕುಲಕ್ಕೆ ಕಂಟಕವಾದ ಸೋಂಕು ವೈದ್ಯರಿಗೂ ಸವಾಲು ಒಡ್ಡಿದೆ. ವೈದ್ಯರು ರೋಗಿಗಳ ಜೀವ ಉಳಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಅಕ್ಷಾ ವೆಲ್‌ಫೇರ್ ಸೊಸೈಟಿ ಅಧ್ಯಕ್ಷೆ ಸುನೀತಾ ಆನಂದ್ ಇದ್ದರು. ಅರವಿಂದ ಕುಲಕರ್ಣಿ ಸ್ವಾಗತಿಸಿದರು. ವೀರಭದ್ರಪ್ಪ ಉಪ್ಪಿನ ನಿರೂಪಿಸಿದರು. ಸಂಜು ಸ್ವಾಮಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT