ಮಂಗಳವಾರ, ಜೂನ್ 2, 2020
27 °C

ಬೀದರ್‌: ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿಗೆ ಅವಹೇಳನ, ಯುವಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನ‌ಕಾರಿ ಚಿತ್ರವನ್ನು ಫೇಸ್‌ಬುಕ್‌ಗೆ ಸ್ಟೇಟಸ್‌ ಆಗಿ ಇಟ್ಟುಕೊಂಡಿದ್ದ ಯುವಕನನ್ನು ಬೀದರ್‌ ತಾಲ್ಲೂಕಿನ ಬಗದಲ್‌ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

‘ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷ ದೀಪ ಬೆಳಗಿಸಬೇಕು ಎಂದು ದೇಶಕ್ಕೆ ಸಂದೇಶ ನೀಡಿದ್ದರು. ಆದರೆ, ಬಾವಗಿಯಲ್ಲಿ ಚಿಕ್ಕದಾದ ಚಹಾ ಅಂಗಡಿ ಇಟ್ಟುಕೊಂಡಿರುವ ಯುವಕ ಜಾವಿದ್‌ ಜಾಫರ್‌ ನಿರಡಿ, ಈ ಅವಧಿಯಲ್ಲಿ ನಾಯಿಯ ಮುಖಕ್ಕೆ ಮೋದಿ ಅವರ ಚಿತ್ರ ಅಂಟಿಸಿ ತನ್ನ ವಾಟ್ಸ್‌ಆ್ಯಪ್‌ನಲ್ಲಿ 9 ನಿಮಿಷ ಸ್ಟೇಟಸ್‌ ಆಗಿ ಇಟ್ಟುಕೊಂಡಿದ್ದ. ನಂತರ ಫೇಸ್‌ಬುಕ್‌ಗೆ ಹಾಕಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೈನ್‌ ಮಾಸ್ಟರ್‌ ಆ್ಯಪ್‌ನಲ್ಲಿ ಮೋದಿ ಅವರ ಚಿತ್ರವನ್ನು ತಿರುಚಿ, ಅವರ ಮುಖಕ್ಕೆ ನಾಯಿಯ ದೇಹದ ಚಿತ್ರವನ್ನು ಅಂಟಿಸಿದ್ದಾನೆ. ಅವರ ಕೊರಳಲ್ಲಿರುವ ಚೈನ್‌ ತನ್ನ ಕೈಯಲ್ಲಿ ಹಿಡಿದುಕೊಂಡಂತೆ ಚಿತ್ರ ರೂಪಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ‘ನಾನು ಯಾರಿಗಾಗಿ ಪ್ರಾಣಕೊಡಲು ಸಿದ್ಧನಿದ್ದೇನೆಯೋ, ಅವರು ನನ್ನನ್ನು ಹೊಡೆದರೂ ಯಾವುದೇ ವ್ಯತ್ಯಾಸವಾಗದು. ಕಾರಣ ಮೃತ್ಯುವಿನ ಇನ್ನೊಂದು ಹೆಸರೇ ಮಿಯಾನ್‌ ಭಾಯಿ’ ಎಂದು ಉರ್ದುವಿನಲ್ಲಿ ಉಚ್ಚರಿಸಿದಂತೆ ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬ್ಯಾಲಹಳ್ಳಿಯಲ್ಲಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಬಿಜೆಪಿ ಬೀದರ್‌ ದಕ್ಷಿಣ ಮತಕ್ಷೇತ್ರ ಘಟಕದ ಅಧ್ಯಕ್ಷ ರೆಡ್ಡಿ ಬಗದಲ್ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು