ಯಳಂದೂರು: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಶ್ರಮಿಕರ ಕೊರತೆ ಹೆಚ್ಚಾಗಿದ್ದು ಸಾಗುವಳಿದಾರರು ಮಾನವ ಶ್ರಮದ ಬದಲು ಕೃಷಿ ಯಂತ್ರಗಳತ್ತ ಚಿತ್ತ ಹರಿಸಿದ್ದಾರೆ.

ಹೊಲ, ಗದ್ದೆ, ತೋಟ, ತಿಟ್ಟುಗಳನ್ನು ಹಸನು ಮಾಡಲು, ಕಳೆ ಕೀಳಲು, ಬಂಡು ಎತ್ತರಿಸಲು ಯಂತ್ರಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಕಡಿಮೆ ಶ್ರಮ, ಗರಿಷ್ಠ ಕೆಲಸ ಮಾಡುವ ಹೊಸ ತಂತ್ರಜ್ಞಾನ ಹಾಗೂ ಮಾದರಿ ಯಂತ್ರಗಳು ತಾಲ್ಲೂಕಿಗೆ ಲಗ್ಗೆಯಿಟ್ಟಿದ್ದು ರೈತರು ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ.

ಹಿಂದೆಲ್ಲ ನಾಟಿ ಪ್ರಕ್ರಿಯೆಯಲ್ಲಿ ಕೂಲಿಯಾಳುಗಳ ಬಳಕೆ ಹೆಚ್ಚಿತ್ತು. ಈಗ ನಾಟಿ ಹಚ್ಚುವ ಮಹಿಳೆಯರ ಸ್ಥಾನದಲ್ಲಿ ಮಿನಿ ಟ್ರಾಕ್ಟರ್ ಹಾಗೂ ಟಿಲ್ಲರ್ಗಳು ಬಂದಿವೆ. ದೇಹಕ್ಕೆ ನೇತು ಹಾಕಿಕೊಂಡು ಪೊದೆ ಕತ್ತರಿಸುವ, ಕೈಯಲ್ಲಿಯೇ ಯಂತ್ರವನ್ನು ಚಾಲು ಮಾಡಿ ಕಳೆಗಿಡಗಳನ್ನು ಕತ್ತರಿಸುವ ಪುಟ್ಟ ಯಂತ್ರಗಳು, ಬಾಳೆ ಬೆಳೆಯಲ್ಲಿ ಬದು ನಿರ್ಮಿಸುವ ಎರಡು ಸ್ಟ್ರೋಕ್ ಎಂಜಿನ್ಗಳು, ಬಹುಪಯೋಗಿ ಟಿಲ್ಲರ್, ಔಷಧಿ ಸಿಂಪಡಿಸುವ ಬ್ಯಾಟರಿ ಚಾಲಿತ ಯಂತ್ರಗಳು ರೈತರ ಆಯ್ಕೆಗಳಾಗಿ ಬದಲಾಗಿವೆ.

ಕೃಷಿ ಮತ್ತು ತೋಟಗಾರಿಕಾ ಇಲಾಖೆಯು ಕೃಷಿಕರ ಅಗತ್ಯತೆಗೆ ತಕ್ಕಂತೆ ರಿಯಾಯಿತಿ ದರದಲ್ಲಿ ಯಂತ್ರಗಳನ್ನು ಪೂರೈಸುತ್ತ ನೆರವು ನೀಡುತ್ತಿವೆ. ಬಹುತೇಕ ಕೃಷಿಕರು ನವನವೀನ ಯಂತ್ರಗಳನ್ನು ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಯಂತ್ರಗಳಿಗೆ ಇಂಧನ ಬಳಸಿಕೊಂಡು ಹುಲ್ಲಿನಿಂದ-ಪೊದೆಯವರೆಗೂ ಹಲವು ಮಾದರಿಯ ಕಳೆಗಿಡಗಳನ್ನು ಕತ್ತರಿಸಬಹುದಾಗಿದೆ. ಸಂದಿ, ಮೂಲೆಗಳಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಯಬಹುದಾಗಿದ್ದು, ಐದಾರು ಮಂದಿ ನಿರ್ವಹಿಸುವ ಕೆಲಸವನ್ನು ಕೇವಲ 2 ಲೀಟರ್ ಪೆಟ್ರೋಲ್ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾಗಿದ್ದು ಆಳು-ಕಾಳಿನ ಹೆಚ್ಚುವರಿ ಹಣ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಕೆಸ್ತೂರು ಕೃಷಿಕ ಮಹಿಳೆ ರೂಪಾ.

ಕೃಷಿ ಯಂತ್ರೋಪಕರಣಗಳ ವಿತರಣೆ:

ಸರ್ಕಾರ ಕಾರ್ಮಿಕರ ಸಮಸ್ಯೆ ನೀಗಿಸಿ, ಕೃಷಿ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆ ಜಾರಿಗೆ ತಂದಿದ್ದು 2025-26ನೇ ಸಾಲಿನಲ್ಲಿ ಉಳುಮೆಯಿಂದ ಕೊಯ್ಲಿನವರೆಗೂ ಹಲವು ಮಾದರಿಯ ಕೃಷಿ ಯಂತ್ರಗಳನ್ನು ನೀಡುತ್ತಿದೆ.

ಪವರ್ ಟಿಲ್ಲರ್, ಟ್ರ್ಯಾಕ್ಟರ್, ರೋಟೋವೇಟರ್, ಕಲ್ಟಿವೇಟರ್, ಡಿಸ್ಕ್ ನೇಗಿಲು, ಮೇವು ಕತ್ತರಿಸುವ ಯಂತ್ರ (ಚಾಫ್ ಕಟ್ಟರ್ ), ಪವರ್ ವೀಡರ್, ಬ್ರಶ್ ಕಟರ್, ಡೀಸೆಲ್ ಪಂಪ್ ಸೆಟ್, ಪವರ್ ಸ್ಪ್ರೇಯರ್, ಬಹುಬೆಳೆ ಒಕ್ಕಣೆ ಯಂತ್ರ, ಪ್ಯಾಡಿ ಪ್ಲಾಂಟರ್, ಬ್ಯಾಲೆರ್, ಟ್ರ್ಯಾಕ್ಟರ್ ಚಾಲಿತ ಬಿತ್ತನೆ ಕೂರಿಗೆ ಯಂತ್ರ, ರಾಗಿ, ಭತ್ತದ ಕಟಾವು ಯಂತ್ರ, ಹಿಟ್ಟಿನ ಗಿರಣಿ, ರಾಗಿ ಕ್ಲೀನಿಂಗ್ ಉಪಕರಣ, ಎಣ್ಣೆಗಾಣಗಳನ್ನು ಪೂರೈಸುತ್ತದೆ.

ಸಾಮಾನ್ಯ ರೈತರಿಗೆ ಶೇ 50, ಪರಿಶಿಷ್ಟ ಜಾತಿ/ಪಂಗಡ ರೈತರಿಗೆ ಶೇ 90ರವರೆಗೆ ಸಹಾಯಧನ ಲಭ್ಯವಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಪಡೆದು ದಾಖಲಾತಿ ಪ್ರಕ್ರಿಯೆ ಪೂರೈಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಎನ್. ಜಿ.ಅಮೃತೇಶ್ವರ ಮಾಹಿತಿ ನೀಡಿದರು.

ಸಹಾಯಧನ ಸೌಲಭ್ಯ:

ಪುಟ್ಟ ಪವರ್ ವೀಡರ್ಗಳಿಗೆ 4 ಬ್ಲೇಡ್ ಹೊಂದಿರುವ ಚಕ್ರಗಳನ್ನು ಸೇರಿಸಿಕೊಂಡು ಯುಪಟೋಪಿಯಂ ಪಾರ್ಥೇನಿಯಂ ಹಾಗೂ ಆಭರಣ ಕಳೆಗಳನ್ನು ತೆಗೆಯಬಹುದಾಗಿದೆ. ಜಮೀನಿನೊಳಗೆ ಬೆಳೆದ ಕಳೆ ಅಲ್ಲಲ್ಲಿ ಬಿದ್ದಿರುವ ಚಿಕ್ಕ ಕಲ್ಲು ಕಸ ಕಡ್ಡಿಗಳನ್ನು ತೆಗೆಯಬಹುದು. ಯಂತ್ರಗಳಿಗೆ ಚಕ್ರ ಸೇರಿಸಿ ತೆಂಗು-ಕಂಗು ತೋಟಗಳನ್ನು ಹಸನು ಮಾಡಬಹುದು. ಪರಿಶಿಷ್ಟ ಜಾತಿ ಹಾಗೂ ವರ್ಗ ಸಾಮಾನ್ಯವರ್ಗದ ಕೃಷಿಕರಿಗೂ ಸರ್ಕಾರ ಸಹಾಯಧನ ನೀಡುತ್ತಿದ್ದು ಲಕ್ಷಾಂತರ ವೆಚ್ಚದ ಯಂತ್ರಗಳನ್ನು ಕಡಿಮೆ ವೆಚ್ಚದಲ್ಲಿ ಖರೀದಿ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.