ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದೊಳಗೆ ಬಿದ್ದಿರುವ ಮದ್ಯದ ಬಾಟಲಿಗಳು
ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿದ್ದಿರುವ ಮದ್ಯದ ಪೌಚ್ ಹಾಗೂ ಬಾಟಲಿಗಳು
ಯಳಂದೂರು ಪಟ್ಟಣದಲ್ಲಿ ಮದ್ಯದ ಪೌಚ್‌ಗಳನ್ನು ಬಿಸಾಡಿರುವುದು
‘ರಾತ್ತಿ ಗಸ್ತು ಹೆಚ್ಚಳ’ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೊಸ ಬಡಾವಣೆಗಳಲ್ಲಿ ರಾತ್ರಿವೇಳೆ ಗಸ್ತು ಹೆಚ್ಚಿಸಲಾಗುವುದು ಸ್ಥಳೀಯರು ಮಾಹಿತಿ ನೀಡಿದರೆ ಪುಂಡರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿ.ಟಿ.ಕವಿತಾ ಎಸ್‌ಪಿ ನಿಯಮ ಉಲ್ಲಂಘಿಸಿದರೆ ಕ್ರಮ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಕಾನೂನುಬಾಹಿರವಾಗಿದ್ದು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮದ್ಯಸೇವಿಸಿ ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದೇವೆ.
ಧರ್ಮೇಂದ್ರ ಕೊಳ್ಳೇಗಾಲ ಡಿವೈಎಸ್‌ಪಿ
‘ಕ್ರೀಡಾಂಗಣದ ದ್ವಾರ ಬಂದ್’ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಖಾಸಗಿ ಬಸ್ ನಿಲ್ದಾಣದಿಂದ ಮುಕ್ತ ಪ್ರವೇಶವಿದ್ದು ಶೀಘ್ರ ಬಂದ್ ಮಾಡಲಾಗುವುದು. ಕ್ರೀಡಾಂಗಣದೊಳಗೆ ಮದ್ಯ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಶೀಘ್ರ ದ್ವಾರಗಳನ್ನು ಮುಚ್ಚಿ ಕ್ರೀಡಾಂಗಣದೊಳಗೆ ಕುಡುಕರು ಬಾರದಂತೆ ಕ್ರಮ ಕೈಗೊಳ್ಳಲಾಗುವುದು.
ಸುರೇಶ್ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ
ಸಾರ್ವಜನಿಕ ಸ್ಥಳಗಳಲ್ಲಿ ಕುಡಿತ ಹೆಚ್ಚಾಗಿದ್ದು ಮಹಿಳೆಯರು ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ಪೊಲೀಸ್ ಇಲಾಖೆ ಗಮನ ಹರಿಸಿ ಗಸ್ತು ಹೆಚ್ಚಿಸಬೇಕು ರಾತ್ತಿಯ ಹೊತ್ತು ಹಲವು ಬಾರಿ ಗಸ್ತು ತಿರುಗಿದರೆ ಸಮಸ್ಯೆ ಬಗೆಹರಿಸಬಹುದು.
ಸುಮನ್ ಕೊಳ್ಳೇಗಾಲ
ಸಂಚಾರ ದುಸ್ತರ ಬಳೆಪೇಟೆ ವೃತ್ತದಲ್ಲಿ ಮುಂಜಾನೆ ಹಾಗೂ ಸಂಜೆ ಜನರು ಸಂಚರಿಸುವುದೇ ದುಸ್ತರವಾಗಿದೆ. ರಸ್ತೆ ಮಧ್ಯೆಯೇ ಕುಡಿದು ಬೀಳುವುದರಿಂದ ಸಾರ್ವಜನಿಕರಿಗೆ ಮುಜುಗರವಾಗುತ್ತಿದೆ.
ಲಿಂಗರಾಜ ಮೂರ್ತಿ ನಾಮನಿರ್ದೇಶನ ಸದಸ್ಯ ಪಟ್ಟಣ ಪಂಚಾಯಿತಿ
ಯಳಂದೂರು ದಂಡ ವಿಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಅಸಭ್ಯವಾಗಿ ವರ್ತಿಸಿ ತೊಂದರೆ ಕೊಡುತ್ತಿದ್ದಾರೆ. ಕುಡುಕರಿಗೆ ಹೆಚ್ಚಿನ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬೇಕು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ನಿಷೇಧ ಹೇರಬೇಕು.