ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ: ಅರಣ್ಯ ಅಕ್ರಮ ಪ್ರವೇಶಕ್ಕೆ ₹1000 ದಂಡ

ಕಾಡಂಚಿನಲ್ಲಿ ಸೂಚನಾ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ
Last Updated 4 ನವೆಂಬರ್ 2020, 20:00 IST
ಅಕ್ಷರ ಗಾತ್ರ

ಯಳಂದೂರು:ವನಪಾಲಕರ ಕಣ್ಣು ತಪ್ಪಿಸಿ ಕಾಡು ಪ್ರವೇಶ, ಅರಣ್ಯಕ್ಕೆ ಹೊಂದಿಕೊಂಡಂತಿರುವ ಕೆರೆ,ಕಟ್ಟೆ, ಜಲಾಶಯಗಳಿಗೆ ಅನಧಿಕೃತ ಪ್ರವೇಶ, ವನ್ಯಧಾಮದ ಸುತ್ತಮುತ್ತ ಕುಳಿತು ಹರಟುವುದು ಮತ್ತು ಮದ್ಯಪಾನ ಮಾಡುವವರಿಗೆ ಇನ್ನೂ ಮುಂದೆ ₹1000 ದಂಡ ಬೀಳಲಿದೆ.

ಅರಣ್ಯ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿರುವವ ವಿರುದ್ಧ ‘ದಂಡ’ ಪ್ರಯೋಗಕ್ಕೆ ಮುಂದಾಗಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಅಲ್ಲಲ್ಲಿ ಫಲಕಗಳನ್ನು ಅಳವಡಿಸುತ್ತಿದ್ದಾರೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪ್ರವೇಶದ್ವಾರ, ಜಲಾವರಗಳ ಸಮೀಪ ರಜಾದಿನ, ವಿಶೇಷ ಸಂದರ್ಭಗಳಲ್ಲಿ ಕಾಡು-ಮೇಡು ಅಲೆಯುವವರ ಸಂಖ್ಯೆ ಇತ್ತೀಚೆಗೆಹೆಚ್ಚಾಗುತ್ತಿದೆ. ಮೋಜು-ಮಸ್ತಿಗಾಗಿ ಇಲ್ಲವೇ ಅಡವಿ ಸುತ್ತುವ ಚಟ ಹೊಂದಿರುವ ಕೆಲವರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನೊಳಕ್ಕೆ ಪ್ರವೇಶಿಸುತ್ತಿದ್ದಾರೆ.ಇದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.

‘ಸುಂದರ ಪರಿಸರ ಹುಡುಕಿಕೊಂಡು ಆಮೆಕೆರೆ ಸಮೀಪದ ಹೊಸಹಳ್ಳಿಕೆರೆ, ಕೃಷ್ಣಯ್ಯನಕಟ್ಟೆಮತ್ತು ಬೆಲವತ್ತ ಜಲಾಶಯಗಳ ಸುತ್ತಮುತ್ತ ಅಲೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರುಮೋಜು-ಮಸ್ತಿಗಾಗಿ ಇಲ್ಲವೇ ಗಾಂಜಾ ಗಿಡಗಳ ಸಂಗ್ರಹಕ್ಕೆ ಅಲೆದಾಡುವುದೂ ಇದೆ. ಈ ವೇಳೆ ಕಾಡುಪ್ರಾಣಿಗಳ ವೀಕ್ಷಣೆ ನೆಪದಲ್ಲಿ ಅರಣ್ಯ ಪ್ರವೇಶಿಸುವವರನ್ನು ತಡೆಯಲು ಜಾಗೃತಿಮೂಡಿಸಲಾಗುತ್ತದೆ. ಇದರ ಭಾಗವಾಗಿ ಮೊದಲು ಎಚ್ಚರಿಕೆ ಫಲಕ ಅಳವಡಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ಕಾಡಂಚಿನ ಪ್ರದೇಶಗಳಲ್ಲಿ ಜನ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ದಂಡ ವಿಧಿಸುವ ಎಚ್ಚರಿಕೆ ಹೊಂದಿರುವ ಸೂಚನಾ ಫಲಕ ಅಳವಡಿಸಲಾಗುತ್ತಿದೆ ಎಂದು ಬಿಳಿಗಿರಿರಂಗನಬೆಟ್ಟ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಲೋಕೇಶ್‌ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಮೆಕೆರೆ ಆಣೆಕಟ್ಟೆ, ಬೆಲವತ್ತ ಡ್ಯಾಂ ಮತ್ತಿತರ ಕಡೆಗಳಲ್ಲಿ ಫಲಕಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ. ಬಾಗಿಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯಗುಂಬಳ್ಳಿ ತಪಾಸಣಾ ಕೇಂದ್ರದ ಮುಂಭಾಗ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆದಿದೆ.

₹1000 ದಂಡ:ಬೆಟ್ಟದ ಪ್ರವೇಶದ್ವಾರದ ಚೆಕ್ ಪೋಸ್ಟ್ ಬಳಿ ದೊಡ್ಡ ಫಲಕ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಉಳಿದ ಭಾಗಗಳಲ್ಲಿ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಪ್ರಕಾರ, ಬಿಆರ್‌ಟ ವನ್ಯ ಜೀವಿಧಾಮದ ಒಳಭಾಗಕ್ಕೆ
ಪ್ರವೇಶಿಸುವುದನ್ನು ನಿಷೇಧಿಸಿದೆ. ನಿಯಮ‌ಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದೆ ಜೊತೆಗೆ ₹1,000ದಂಡವನ್ನೂ ವಿಧಿಸಲಾಗುವುದು’ ಎಂದು ಆರ್‌ಎಫ್‌ಒ ಲೋಕೇಶ್‌ ಮೂರ್ತಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT