ಸಾಮಾನ್ಯವಾಗಿ ಬೇಟೆಯಾಡುವ ಸಂದರ್ಭದಲ್ಲಿ ತಾಯಿ ಹುಲಿ ಮರಿಗಳನ್ನು ಬಿಟ್ಟು ಹೋಗುತ್ತದೆ, ಅಥವಾ ಗಡಿಗಾಗಿ ಕಾದಾಡುವ ಸಂದರ್ಭ ಮರಿಗಳಿಂದ ದೂರ ಉಳಿಯುತ್ತದೆ. ಎಲ್ಲ ಆಯಾಮಗಳಲ್ಲೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಶೀಘ್ರ ಪತ್ತೆ ಮಾಡಲಾಗುವುದು. ಜನವಸತಿ ಪ್ರದೇಶದಿಂದ 8 ಕಿ.ಮೀ ದೂರದ ಕೋರ್ ವಲಯದಲ್ಲಿ ಹುಲಿ ಮರಿಗಳು ಸಿಕ್ಕಿದ್ದು ತಾಯಿ ಹುಲಿಯನ್ನು ಬೇಟೆಯಾಡಿರುವ ಸಾದ್ಯತೆಗಳು ತೀರಾ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.