ಭಾನುವಾರ, ಜೂನ್ 26, 2022
28 °C

ಬೆಂಬಲ ಬೆಲೆಯಲ್ಲಿ ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕರ್ನಾಟಕ ಹಾಲು ಮಹಾ ಮಂಡಳಿಯು (ಕೆಎಂಎಫ್‌) ಪಶು ಆಹಾರ ತಯಾರಿಕೆಗೆ ಮುಖ್ಯ ಕಚ್ಚಾ ಪದಾರ್ಥವಾದ ಮೆಕ್ಕೆಜೋಳವನ್ನು ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹1,760ರಂತೆ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ಸಣ್ಣ ಮತ್ತು ಅತಿಸಣ್ಣ ರೈತರು, ಹಾಲು ಉತ್ಪಾದಕರು ಕೃಷಿ ಇಲಾಖೆಯಿಂದ ನೀಡುವ ತಂತ್ರಾಂಶದ ಐ.ಡಿ ಹಾಗೂ ಮೆಕ್ಕೆಜೋಳದ 1 ಕೆ.ಜಿ ಮಾದರಿಯನ್ನು ತಮ್ಮ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಯವರ ಮೂಲಕ ಒಕ್ಕೂಟಕ್ಕೆ ಸಲ್ಲಿಸಬೇಕು. ಒಕ್ಕೂಟವು ಮಾದರಿ ಗುಣಮಟ್ಟದ ಪರಿಶೀಲನೆಗಾಗಿ ‌ಹಾಸನದಲ್ಲಿರುವ ಕೆಎಂಎಫ್ ಪಶು ಆಹಾರ ಘಟಕಕ್ಕೆ ರವಾನಿಸಿ ರೈತರು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಫಲಿತಾಂಶ ಕಳುಹಿಸಲಿದೆ.

ಮಾದರಿ ಉತ್ತೀರ್ಣಗೊಂಡಲ್ಲಿ ಎಸ್ಎಂಎಸ್‌ನಲ್ಲಿ ತಿಳಿಸಲಾಗುವ ದಿನಾಂಕದಂದು ನಿಬಂಧನೆಗೊಳಪಟ್ಟು ಖುದ್ದಾಗಿ ತಾವೇ ಹಾಸನ ಪಶು ಆಹಾರ ಘಟಕಕ್ಕೆ ಮೆಕ್ಕೆಜೋಳವನ್ನು ಸರಬರಾಜು ಮಾಡಬೇಕು. ಮಾಹಿತಿಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಅಥವಾ ಒಕ್ಕೂಟದ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು