ಕೊಳ್ಳೇಗಾಲ: ಭಾರತ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಮುಡಿಗುಂಡದ ಬಳಿ ಹೆದ್ದಾರಿಯಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗೌಡೇ ಗೌಡ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ಕೃಷಿಕರ ಮರಣ ಶಾಸನವನ್ನು ಬರೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡಎ.ಆರ್.ಕೃಷ್ಣಮೂರ್ತಿ ಅವರು ಮಾತನಾಡಿ, ‘ಅನ್ನದಾತರಿಗೆ ಅನ್ಯಾಯ ಮಾಡುವುದರಲ್ಲಿ ಕೇಂದ್ರ ಸರ್ಕಾರ ನಂ. 1 ಸ್ಥಾನ ಪಡೆದಿದೆ. ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ರೈತರನ್ನು ಯಾರೂ ಹಗುರವಾಗಿ ಕಾಣಬೇಡಿ’ ಎಂದು ಎಚ್ಚರಿಸಿದರು.

ರಸ್ತೆ ತಡೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಮೂರು ಕಿ.ಮೀ ಉದ್ದದವರೆಗೂ ವಾಹನಗಳು ನಿಂತಿದ್ದವು.

ಕಾಂಗ್ರೆಸ್ ಮುಖಂಡರಾದ ಬಾಲರಾಜ್, ಜಯಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂರಾದ ಶಿವಕುಮಾರ್, ಅಕ್ಮಲ್ ಪಾಷ, ಶಾಂತರಾಜು, ಕಿರಣ್, ಮಲ್ಲು, ಚಿನ್ನಸ್ವಾಮಿ ಮಾಳಿಗೆ, ರವಿ, ಆನಂದ್, ಸ್ವಾಮಿ ನಂಜಪ್ಪ, ಮೂರ್ತಿ, ಮಲ್ಲಿಕಾರ್ಜುನ, ರೈತ ಮುಖಂಡ ಶೈಲೇಂದ್ರ, ಅಣಗಳ್ಳಿ ಬಸವರಾಜು, ಶಿವರಾಮ್, ರವಿನಾಯ್ಡು, ರಾಚಪ್ಪ, ಬಸವಣ್ಣ, ಬಸವರಾಜು, ದಶರತ್, ರೇಚಣ್ಣ, ಜಯರಾಜ್, ಶಿವಣ್ಣ, ಶಿವಮ್ಮ, ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.