ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಞಾನ ಭಂಡಾರ ಸಂರಕ್ಷಿಸಿಕೊಳ್ಳಿ: ಡಾ.ಪ್ರಶಾಂತ್

ಬಿಳಿಗಿರಿರಂಗನಬೆಟ್ಟದಲ್ಲಿ ಸೋಲಿಗ ಚರಿತ್ರೆಗೆ ಮುನ್ನುಡಿ ಬರೆದ ‘ಕಾನು’
Published 25 ಆಗಸ್ಟ್ 2024, 14:11 IST
Last Updated 25 ಆಗಸ್ಟ್ 2024, 14:11 IST
ಅಕ್ಷರ ಗಾತ್ರ

ಯಳಂದೂರು: ದಕ್ಷಿಣ ಭಾರತದ ಬುಡಕಟ್ಟು ಜನರ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಅದನ್ನು ದಾಖಲಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದು ಐಪಿಎಚ್ ಪೌಂಢೇಶನ್ ನಿರ್ದೇಶಕ ಡಾ.ಪ್ರಶಾಂತ್ ಹೇಳಿದರು.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದಲ್ಲಿ ಭಾನುವಾರ ಜಿಲ್ಲಾ ಬುಟಕಟ್ಟು ಸಂಘ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಕಾನು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಭಾತರದ ಆದಿವಾಸಿ ಸಮೂಹ ತಮ್ಮದೇ ಆದ ನುಡಿ ಪರಂಪರೆ ಹೊಂದಿದೆ. ಕಾಡು ಕೇಂದ್ರಿತ ನೃತ್ಯ, ಹಾಡು-ಹಸೆ, ಓಲಗ, ಕಗ್ಗವನ್ನು ಕಾಡು ಜನರು ಉಳಿಸಿದ್ದಾರೆ. ನಿಸರ್ಗ ಸಂರಕ್ಷಣೆ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅಪಾರ ಗಿಡಮೂಲಿಕೆಗಳ ಜ್ಞಾನ ಭಂಡಾರವನ್ನು ಕಾಪಿಟ್ಟಿದ್ದಾರೆ. ಇಂತಹ ನೆಲ ಮೂಲ ಸಾಂಸ್ಕೃತಿಕ ಕಥನಗಳನ್ನು ಸೋಲಿಗ ಸಮುದಾಯ ದಾಖಲಿಸುವ ಮೂಲಕ, ಮುಂದಿನ ಪೀಳಿಗೆಗೂ ಉಳಿಸಬೇಕಿದೆ ಎಂದರು.

ಸೋಲಿಗ ಮುಖಂಡರಾದ ಕೇತಮ್ಮ, ‘ಭಾರತದಲ್ಲಿ ನೂರಾರು ಬುಡಕಟ್ಟುಗಳು ಇವೆ. ಆದರೆ. ಸೋಲಿಗರ ಜ್ಞಾನ ವೈಶಾಲ್ಯ ಹೆಚ್ಚಿನದು. ಇವರ ಪರಿಸರ ಪ್ರೀತಿ ದೊಡ್ಡದು. ಪ್ರಾಣಿ ಮತ್ತು ಸಸ್ಯ ವೈವಿಧ್ಯತೆಯ ಅನುಬಂಧದ ಸಹಚರ್ಯೆ ಜೊತೆಜೊತೆಯಾಗಿ ಸಾಗಿದೆ. ‘ಕಾನು’ ಪರಿಕಲ್ಪನೆಯಲ್ಲಿ ಹಾಡಿ ಮಂದಿಯ ಕೌಶಲ, ಕೌಟುಂಬಿಕ ವ್ಯವಸ್ಥೆ, ಸಮೂಹ ಜೀವನದ ಬಗ್ಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಕ್ಷಿಸಬೇಕು’ ಎಂದರು.

ಬುಡಕಟ್ಟು ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿ, ‘ಒಂದೇ ವೇದಿಕೆಯಲ್ಲಿ ‘ಕಾನು’ ಇಡಿ ಬುಡಕಟ್ಟು ಸಮಾಜದ ಕಥೆ ಹೇಳಲಿದೆ. 1200ಕ್ಕೂ ಹೆಚ್ಚು ಪುಸ್ತಕ, ಬ್ಲಾಗ್, ಪತ್ರಿಕೆ ಮತ್ತು ಟಿಜಿಟಲ್ ಮೂಲಕ ಆದಿವಾಸಿಗಳ ಬದುಕು ಬವಣೆ ಬಿತ್ತರವಾಗಲಿದೆ. ಇದಕ್ಕೆ ಆದಿವಾಸಿ ಜ್ಞಾನ ಕೇಂದ್ರ ನೆರವಾಗಲಿದೆ. ಕಲಿತ ಕಾನನದ ಮಕ್ಕಳು ಈ ಪರಿಕಲ್ಪನೆಗೆ ಮತ್ತಷ್ಟು ಮೆರಗು ನೀಡಬೇಕು ಎಂದು ಹೇಳಿದರು.

ತಮಿಳುನಾಡಿ ಕೀ ಸ್ಟೋನ್ ಸಂಸ್ಥೆಯ ಸದಸ್ಯರು, ಗಿರಿಜನ ಸಂಶೋಧನ ಸಂಸ್ಥೆಯ ಲೇಖಕ ಕೃಷ್ಣಮೂರ್ತಿ, ಕೇರಳ ಸಂಶೋಧಿಕಿ ಆಶಾ, ಜಡೇಸ್ವಾಮಿ, ಮುತ್ತಯ್ಯ, ಕೊನೆರೇಗೌಡ, ಕೇತಮ್ಮ, ರಾಜಪ್ಪ, ದಾಸೇಗೌಡ ಇದ್ದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದಲ್ಲಿ ಭಾನುವಾರ ಜಿಲ್ಲಾ ಬುಡಕಟ್ಟು ಸಂಘ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಕಾನು’ ಕಾರ್ಯಕ್ರಮವನ್ನು ಸೋಲಿಗ ಮುಖಂಡರಾದ ಕೇತಮ್ಮ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT