ಚಾಮರಾಜನಗರ: ನಗರದ ರಾಮ ಸಮುದ್ರದ ಸಮೀಪ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಉಂಟಾಗಿರುವ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆ ಕ್ರಮಗೊಂಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಡು ವಂತಾಗಿದೆ.
ಬಿ.ರಾಚಯ್ಯ ಜೋಡಿ ರಸ್ತೆಯು ರಾಮಸಮುದ್ರದ ಬಳಿ ಮುಕ್ತಾಯವಾದ ನಂತರ, ಬೂದಿತಿಟ್ಟು ಕ್ರಾಸ್ ಹಾಲಿನ ಡೇರಿಗೂ ಮೊದಲು ಇರುವ ತಿರುವಿನಲ್ಲಿ ದೊಡ್ಡ ಹಳ್ಳ ನಿರ್ಮಾಣವಾಗಿತ್ತು.ಮಾತ್ರವಲ್ಲದೇ ರಸ್ತೆಯ ಅಗಲಕ್ಕೂ ಹಳ್ಳದ ರಚನೆ ಇತ್ತು. ಎರಡು ವರ್ಷಗಳಿಂದಲೂ ರಸ್ತೆ ಇದೇ ರೀತಿ ಇದ್ದರೂ, ದುರಸ್ತಿಗಾಗಿ ಕ್ರಮ ವಹಿಸಿರಲಿಲ್ಲ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ಹಾಗೂ ಮೂರು ಚಕ್ರಗಳ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿತ್ತು.
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ‘ಪ್ರಜಾವಾಣಿ’ಯ ಆ.25ರ ಸಂಚಿಕೆಯಲ್ಲಿ ‘ಬಲಿಗಾಗಿ ಕಾಯುತ್ತಿದೆ ಗುಂಡಿ; ದುರಸ್ತಿಗೆ ಆಗ್ರಹ’ ಎಂಬ ತಲೆಬರಹದ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಆ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿಜಯ್ ಕುಮಾರ್, ‘ಗುಂಡಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ದೂರುಗಳು ಬಂದಿವೆ. ದುರಸ್ತಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಸರಿಯಾಗಲಿದೆ’ ಎಂದು ಹೇಳಿದ್ದರು.
ವಿಶೇಷ ವರದಿ ಪ್ರಕಟವಾಗಿ 19 ದಿನದ ನಂತರ ಗುಂಡಿ ಹಾಗೂ ತಿರುವಿನಲ್ಲಿ ಉಂಟಾಗಿದ್ದ ಆಳದ ರಚನೆಯನ್ನು ಮುಚ್ಚಲು ಇಲಾಖೆ ಕ್ರಮ ಕೈಗೊಂಡಿದೆ. ಮಂಗಳವಾರ ಆರು ಮಂದಿ ಕಾರ್ಮಿಕರು ದುರಸ್ತಿ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.