ಗುಂಡ್ಲುಪೇಟೆ: ಮಹಿಳೆಯಿಂದ ಚಿನ್ನದ ಸರ, ಮಾಂಗಲ್ಯ ಮತ್ತು ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ₹8 ಲಕ್ಷ ಮೌಲ್ಯದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ವಾಂಜಿನಾಥನ್ ಅಲಿಯಾಸ್ ವಾಂಜಿ ಹಾಗೂ ಪ್ರಭಾಕರನ್ ಬಂಧಿತರು. ಜ.3ರಂದು ಪಟ್ಟಣದ ರಾಮಸ್ವಾಮಿ ಕ್ಲಿನಿಕ್ ಬಳಿ ನಡೆದುಕೊಂಡು ಹೋಗುವಾಗ ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ನಂಜನಗೂಡಿನಲ್ಲೂ ಮಹಿಳೆಯರಿಂದ ಸರ ಅಪಹರಿಸಿರುವ ಬಗ್ಗೆ ದೂರು ದಾಖಲಾಗಿತ್ತು.

ಎಸ್ಪಿ ಎಂ.ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ ಗುಂಡ್ಲುಪೇಟೆಯಲ್ಲಿ ಕಸಿದುಕೊಂಡಿದ್ದ 40 ಗ್ರಾಂ ಮಾಂಗಲ್ಯ ಸರ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಬಳಿ ಮಹಿಳೆಯಿಂದ ಕಸಿದುಕೊಂಡಿದ್ದ ಚಿನ್ನದ ಮಾಂಗಲ್ಯ, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ತಮಿಳುನಾಡು ಸೇರಿ ಹಲವು ಕಡೆಗಳಲ್ಲಿ ಸರಗಳ್ಳತನ, ಮನೆಗಳಲ್ಲಿ ಕಳ್ಳತನ ಹಾಗೂ ಬೈಕ್ ಹಾಗೂ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪಿ.ಐ. ಜಯಕುಮಾರ್, ಸಂತೇಮರಳ್ಳಿ ವೃತ್ತದ ಸಿಪಿಐ ಸಾಗರ್, ತೆರಕಣಾಂಬಿ ಪೊಲೀಸ್ ಠಾಣೆ ಪಿಎಸ್ಐ ಕೆ.ಎಂ.ಮಹೇಶ, ಸಿಬ್ಬಂದಿ ಬಂಟಪ್ಪ, ಪುಟ್ಟರಾಜು, ಕಿಶೋರ್, ಶಿವರಾಜು, ಮೋಹನ್, ಕೃಷ್ಣ, ರಾಜು, ಮಹೇಶ, ನಿಂಗರಾಜು, ನಟೇಶ ಹಾಗೂ ಜೀಪ್ ಚಾಲಕರಾದ ಮಹದೇವಸ್ವಾಮಿ, ಸಂತೋಷ್, ಜಯಕುಮಾರ್, ಮಹದೇವ್ ಮತ್ತು ಸಿ.ಡಿ.ಆರ್. ವಿಭಾಗದ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.