ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಲ್ಲಿ ಪೆರುಮಾಳ್ ಎಂಬುವವರಿಗೆ ಸೇರಿದ ಜಮೀನಿಗೆ ಕಾಡು ಹಂದಿಗಳು ನುಗ್ಗಿ ಜೋಳದ ಫಸಲನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದ್ದು ಅಧಿಕಾರಿಗಳು ಹಾವಳಿ ತಡೆಗಟ್ಟದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಂಚಾಪುರ ಗ್ರಾಮದ ಪೆರುಮಾಳ್ ಎಚ್ಚರಿಸಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದಾರೆ. ಫಸಲು ಕಟಾವಿಗೆ ಬಂದಾಗಲೇ ಗುರುವಾರ ರಾತ್ರಿ ಕಾಡು ಹಂದಿಗಳ ಹಿಂಡು ಜಮೀನಿಗೆ ನುಗ್ಗಿ, ಜೋಳದ ತಿಂದು, ತುಳಿದು ಸಂಪೂರ್ಣ ನಾಶಗೊಳಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಅರಣ್ಯ ಇಲಾಖೆಯಿಂದ ಅಧಿಕಾರಿಗಳು ಪರಿಶೀಲಿಸಿ ಪರಿಹಾರವನ್ನೂ ನೀಡಲು ವಿಳಂಬ ಮಾಡಿದರೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.