‘ಅನುದಾನ ಕೊರತೆಯಿಂದ ಹಿನ್ನಡೆ’
‘ಪ್ರತಿ ವರ್ಷ ಹೊಸ ವರ್ಷಾಚರಣೆ ಸಂದರ್ಭ ಬೆಂಕಿ ರೇಖೆ ನಿರ್ಮಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿತ್ತು. ಕೆಳ ಹಂತದ ಸಿಬ್ಬಂದಿಯ ಜೊತೆಗೆ ಸ್ಥಳೀಯ ಬುಡಕಟ್ಟಿನ ನಿಪುಣ ಶ್ರಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಬೆಂಕಿ ರೇಖೆ ಕಾರ್ಯಕ್ಕೆ ವೇಗ ಸಿಕ್ಕಿಲ್ಲ. ಅನುದಾನದ ಕೊರತೆಯಿಂದ ಕಾಡ್ಗಿಚ್ಚು ತಡೆಗೆ ಹಿನ್ನಡೆಯಾಗಿದೆ’ ಎನ್ನುತ್ತಾರೆ ಗಿರಿವಾಸಿಗಳು.