ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೋ ಇಂಡಿಯಾಕ್ಕೆ ಯಂಗ್ ಸ್ಕಾಲರ್ ಶಾಲೆ ತಂಡ

Published 28 ಡಿಸೆಂಬರ್ 2023, 13:53 IST
Last Updated 28 ಡಿಸೆಂಬರ್ 2023, 13:53 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಚೆನ್ನೈನಲ್ಲಿ ಡಿ. 29ರಂದು ನಡೆಯುವ ಖೇಲೋ ಇಂಡಿಯಾ ರಗ್ಬಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಟ್ಟಣದ ಯಂಗ್ ಸ್ಕಾಲರ್ ಶಾಲಾ ಮಕ್ಕಳು ತೆರಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಶುಭಕೋರಿ ಬೀಳ್ಕೋಡಲಾಯಿತು.

‘ಕರ್ನಾಟಕ ತಂಡವನ್ನು ಯಂಗ್ ಸ್ಕಾಲರ್ ಶಾಲಾ ಮಕ್ಕಳು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮಕ್ಕಳು ಪಂದ್ಯಾವಳಿ ಗೆದ್ದು ಪದಕ ತರಲಿ’ ಎಂದು ಶಾಲಾ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಶುಭ ಕೋರಿದರು.

ಉಪಾಧ್ಯಕ್ಷರಾದ ಎಚ್.ಎಸ್. ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕನಾಯಕ, ಶಾಲಾ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT