ಶುಕ್ರವಾರ, ಜೂಲೈ 3, 2020
21 °C
ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ಕೃತ್ಯ, ಜಿಲ್ಲೆಯಲ್ಲಿ ಮುಂದುವರಿದ ಬಾರ್‌ ಕಳ್ಳತನ

ಕನ್ನ ಕೊರೆದು ಮದ್ಯ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‍ ಹಿಂಭಾಗದ ಗೋಡೆಗೆ ಗುರುವಾರ ರಾತ್ರಿ ಕಿಂಡಿ ಕೊರೆೆದು, ಸಿಸಿ ಟಿ.ವಿ ಕ್ಯಾಮೆರಾಗಳನ್ನು ನಾಶಪಡಿಸಿ ಖದೀಮರು ಮದ್ಯ ಕಳ್ಳತನ ಮಾಡಿದ್ದಾರೆ.

ಲಾಕ್‌ಡೌನ್‌ ಕಾರಣಕ್ಕೆ ಮಾರ್ಚ್‌ 24 ರಿಂದಲೇ ಬಾರ್‌ ಬೀಗ ಹಾಕಿತ್ತು. ಮದ್ಯ ವ್ಯಸನಿಗಳು ಮದ್ಯಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಾರ್ ಮಾಲೀಕ ರಂಗಸ್ವಾಮಿ ಅವರು ನಂದಿಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಬಾರ್‌ಗಳ ಕಳ್ಳತನ ಮುಂದುವರಿದಿದೆ. ಏಪ್ರಿಲ್ 15ರಂದು ನಗರದ ಬಿ.ಬಿ.ರಸ್ತೆಯ ಬಾಲಾಜಿ ವೈನ್‌ ಸ್ಟೋರ್‌ ಗೋಡೆ ಕೊರೆದು ಮದ್ಯ ಕಳವು ಮಾಡಲಾಗಿತ್ತು. ನಂತರ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈ ಹುಣಸೇನಹಳ್ಳಿ ಹಾಗೂ ಜೆ ವೆಂಕಟಾಪುರದ ಬಳಿಯ ಬಾರ್‌ಗಳಲ್ಲೂ ಕಳ್ಳತನ ನಡೆದಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು