ಬಾಗೇಪಲ್ಲಿ: ಭರತನಾಟ್ಯ ಕಲಾವಿದೆ ಹಾಸಿನಿ ಗಂಗಾಧರ್ ಸತತವಾಗಿ 220 ಗಂಟೆ ಭರತನಾಟ್ಯ ಪ್ರದರ್ಶಿಸಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ಗೆ ದಾಖಲಾಗಲು ಆಣಿಯಾಗಿದ್ದಾರೆ ಎಂದು ವಕೀಲ ಎ.ಜಿ.ಸುಧಾಕರ್ ಮಾಹಿತಿ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ನೇತಾಜಿ ವೃತ್ತದ ಬಳಿ ನಿವಾಸಿ ಲಲಿತಮ್ಮ ಹಾಗೂ ಗಂಗಾಧರ್ ಪುತ್ರಿ ಹಾಸಿನಿಗಂಗಾಧರ್ ಬಾಲ್ಯದಲ್ಲಿ ಭರತನಾಟ್ಯ ತರಬೇತಿ ಪಡೆದಿದ್ದಾರೆ. ತಮಿಳುನಾಡು, ಕೇರಳ, ಮಲೇಷ್ಯಾ ಬೆಂಗಳೂರು, ತಿರುಪತಿ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.

ಸೆಪ್ಟೆಂಬರ್ 21 ರಿಂದ 30 ರವರೆಗೆ ಪಟ್ಟಣದ ಬಸ್ ಘಟಕದ ರಸ್ತೆಯ ಡಿ.ಎಸ್.ಅನಿತ ಮನೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಸಿ.ಸಿ ಕ್ಯಮೆರಾ ಅಳವಡಿಸಲಾಗಿದೆ. ಪ್ರದರ್ಶನವನ್ನು ಲೈವ್ ಮೂಲಕ ಇಂಗ್ಲೆಂಡ್ನಲ್ಲಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ನ ಸದಸ್ಯರು ವೀಕ್ಷಣೆ ಮಾಡಲಿದ್ದಾರೆ ಎಂದರು.

ಹಾಸಿನಿಗಂಗಾಧರ್ ಮಾತನಾಡಿ, ಅನೇಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದ್ದೇನೆ. 220 ಗಂಟೆ ಭರತನಾಟ್ಯ ಪ್ರದರ್ಶಿಸಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಲು ಇಚ್ಛಿಸಿದ್ದೇನೆ ಎಂದರು.

ವಕೀಲ ವಿ.ನಾರಾಯಣ, ಗಂಗಾಧರ್, ಸುರೇಶ್, ಮಂಜುಳ, ವಿಜಯಜ್ಯೋತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.