ದುಬೈ: ಆರಂಭಿಕ ಆಟಗಾರ ಸೈಫ್ ಹಸನ್ (61 ರನ್; 45ಎ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹಿದ್ ಹೃದಯ್ (58 ರನ್; 37ಎ) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ತಂಡವು ಏಷ್ಯಾಕಪ್ ಕ್ರಿಕೆಟ್ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 5 ವಿಕೆಟ್ಗಳಿಂದ ಮಣಿಸಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅಂತಿಮ ಓವರ್ವರೆಗೂ ತೀವ್ರ ಪೈಪೋಟಿ ಕಂಡುಬಂತು. ಲಂಕಾ ನೀಡಿದ್ದ 169 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಲಿಟನ್ ದಾಸ್ ಪಡೆಯು 18.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದಾಗ ಸುಲಭವಾಗಿ ಪಂದ್ಯ ಗೆಲ್ಲುವಂತೆ ಕಂಡಿತು. ಆದರೆ, 19ನೇ ಓವರ್ನಲ್ಲಿ ಬೌಲಿಂಗ್ಗೆ ಇಳಿದ ದುಷ್ಮಂತ ಚಮೀರ ಅವರು ತೌಹಿದ್ ಅವರ ವಿಕೆಟ್ ಪಡೆಯುವುದರೊಂದಿಗೆ ಕೇವಲ 7 ರನ್ ಬಿಟ್ಟುಕೊಟ್ಟರು. ಪಂದ್ಯ ರೋಚಕ ಹಂತ ತಲುಪಿತು.

ಬಾಂಗ್ಲಾ ಗೆಲುವಿಗೆ ಕೊನೆಯ ಓವರ್ನಲ್ಲಿ 5 ರನ್ ಬೇಕಿತ್ತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಎದೆಗುಂದದೆ ಆಡಿದ ಬಾಂಗ್ಲಾ ಆಟಗಾರರು ಗುಂಪು ಹಂತದ ಸೋಲಿಗೆ ಪ್ರತೀಕಾರ ತೆಗೆದುಕೊಂಡರು.

ಗುಂಪು ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಭರ್ಜರಿ ಆತ್ಮವಿಶ್ವಾಸದಲ್ಲಿದ್ದ ಚರಿತ ಅಸಲಂಕಾ ಬಳಗವು ಸೋಲಿನ ಆಘಾತ ಎದುರಿಸಿತು.

ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಲಿಟನ್ ದಾಸ್ ಅವರ ಈ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಮೆಹದಿ ಹಸನ್ (25ಕ್ಕೆ2) ಹಾಗೂ ಮುಸ್ತಫಿಜುರ್ ರೆಹಮಾನ್ (20ಕ್ಕೆ3) ಅವರು ಲಂಕಾ ತಂಡವನ್ನು 20 ಓವರ್ಗಳಲ್ಲಿ 168 ರನ್ಗಳಿಗೆ ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರು

ಶ್ರೀಲಂಕಾ: 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 168 (ಪಥುಮ್ ನಿಸಾಂಕ 22, ಕುಸಾಲ ಮೆಂಡಿಸ್ 34, ಕುಸಾಲ ಪೆರೆರಾ 16, ದಸುನ್ ಶನಾಕಾ ಔಟಾಗದೇ 64, ಚರಿತ ಅಸಲಂಕಾ 21; ಮೆಹದಿ ಹಸನ್ 25ಕ್ಕೆ2, ಮುಸ್ತಫಿಜುರ್ ರೆಹಮಾನ್ 20ಕ್ಕೆ3)

ಬಾಂಗ್ಲಾದೇಶ: 19.5 ಓವರ್ಗಳಲ್ಲಿ 6 ವಿಕೆಟ್ಗಳಿಗೆ 169 (ಸೈಫ್ ಹಸನ್ 61, ತೌಹಿದ್ ಹೃದಯ್ 58, ಲಿಟನ್ ದಾಸ್ 23; ವನಿಂದು ಹಸರಂಗ 22ಕ್ಕೆ2, ದಸುನ್ ಶನಾಕ 21ಕ್ಕೆ2)

ಫಲಿತಾಂಶ: ಬಾಂಗ್ಲಾದೇಶಕ್ಕೆ 4 ವಿಕೆಟ್ಗಳ ಜಯ

ಪಂದ್ಯದ ಆಟಗಾರ: ಸೈಫ್ ಹಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.