ನಗರದ ಬೈ ಪಾಸ್ ನಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದ 22 ಅಡಿ ಎತ್ತರದ ಪ್ರಣವ ರುದ್ರ ಮಹಾ ಗಣಪತಿ
ನಗರದ ಬೈ ಪಾಸ್ ರಸ್ತೆಯಲ್ಲಿ ಗಣಪತಿ ನೋಡಲು ಬಂದ ಜನ ಸ್ತೋಮ
ಪೊಲೀಸ್ ಸರ್ಪಗಾವಲು
ಇತ್ತೀಚೆಗೆ ಗಣೇಶ ವಿಸರ್ಜನಾ ಸಮಯದಲ್ಲಿ ಹಾಸನ ಮದ್ದೂರು ದೊಡ್ಡಬಳ್ಳಾಪುರದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಗೌರಿಬಿದನೂರು ಗಣೇಶ ವಿಸರ್ಜನೆ ವೇಳೆ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಎಸ್‌ಪಿ ಒಬ್ಬರು ಎಎಸ್‌ಪಿ ಮೂವರು ಡಿವೈಎಸ್ಪಿ 10 ಮಂದಿ ಇನ್‌ಸ್ಪೆಕ್ಟರ್ 20 ಪಿಎಸ್‌ಐ ಎರಡು ಕೆಎಸ್‌ಆರ್‌ಪಿ ತುಕಡಿ 4 ಡಿಎಆರ್ ತುಕಡಿಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರು ಇದ್ದರು. ಚರ್ಚ್ ಮಸೀದಿಗಳ ಬಳಿ ಇನ್‌ಸ್ಪೆಕ್ಟರ್ ಪಿಎಸ್‌ಐ ನಿಯೋಜಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಸಿ.ಸಿ ಟಿವಿ ಕ್ಯಾಮೆರಾ ಡ್ರೋಣ್ ಕಣ್ಗಾವಲು ಹಾಕಲಾಗಿತ್ತು.