ಚಿಂತಾಮಣಿ: ಪ್ರಮುಖ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿರುವ ಚಿಂತಾಮಣಿ ದಿನೇ ದಿನೇ ವಿಸ್ತಾರವಾಗುತ್ತಿದೆ. ಆದರೆ, ನಗರದಲ್ಲಿ ವಾಹನಗಳ ನಿಲುಗಡೆಗೆ ನಿರ್ದಿಷ್ಟ ಸ್ಥಳವನ್ನು ಈವರೆಗೆ ಗುರುತಿಸಿಲ್ಲ. ಇದರಿಂದಾಗಿ ತಾಲ್ಲೂಕು ಆಡಳಿತ ಭವನದ ಆವರಣ ಮತ್ತು ಮುಂಭಾಗವು ವಾಹನ ನಿಲುಗಡೆಯ ತಾಣವಾಗಿ ಪರಿವರ್ತನೆಯಾಗಿದೆ.

ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಕಚೇರಿ, ಉಪ-ಖಜಾನೆ, ಭೂ ದಾಖಲೆಗಳ ಇಲಾಖೆ ಕಚೇರಿ, ನೋಂದಣಾಧಿಕಾರಿ ಕಚೇರಿ, ಆಹಾರ ಇಲಾಖೆ ಕಚೇರಿ ಸೇರಿದಂತೆ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ನಿತ್ಯ ಕೆಲಸ ಕಾರ್ಯಗಳಿಗಾಗಿ ನೂರಾರು ಜನ ಇಲ್ಲಿಗೆ ಬರುತ್ತಾರೆ. ತಾಲ್ಲೂಕು ಆಡಳಿತ ಭವನಕ್ಕೆ ಬರುವವರು ಮಾತ್ರವಲ್ಲದೆ, ಸಮೀಪದ ಇತರೆ ಸ್ಥಳಗಳಿಗೆ ಭೇಟಿ ನೀಡುವ ಜನರು ತಮ್ಮ ವಾಹನಗಳನ್ನು ತಾಲ್ಲೂಕು ಆಡಳಿತ ಭವನದಲ್ಲೇ ನಿಲ್ಲಿಸಿ ಹೋಗುತ್ತಿದ್ದಾರೆ.

ಭವನದ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ಕಚೇರಿಗಳಿಗೆ ಬರುವ ಜನ ಸಾಮಾನ್ಯರು ಮತ್ತು ಅಧಿಕಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ವಾಹನಗಳಿಂದಾಗಿ ತಹಶೀಲ್ದಾರ್ ಜೀಪ್ ಸಹ ತೆರಳಲು ಅಸಾಧ್ಯವಾದುದ್ದಾಗಿದೆ. ತಹಶೀಲ್ದಾರ್ ಜೀಪು ಬೆಳಿಗ್ಗೆ ಬಂದು ನಿಲ್ಲಿಸಿದ್ದರೆ ಮತ್ತೆ ತೆಗೆಯಲು ದ್ವಿಚಕ್ರ ವಾಹನಗಳು ಅಡ್ಡಿಯಾಗಿರುತ್ತವೆ.

ಪಾದಾಚಾರಿ ಮಾರ್ಗದಲ್ಲೂ ನಿಲುಗಡೆ: ಭವನದ ಮುಂಭಾಗದ ಪಾದಾಚಾರಿ ಮಾರ್ಗವೂ ಸಹ ಸಂಪೂರ್ಣ ವಾಹನಗಳ ನಿಲ್ದಾಣವಾಗಿರುತ್ತದೆ. ತಾಲ್ಲೂಕು ಆಡಳಿತ ಭವನ ಮತ್ತು ಅದರ ಪಕ್ಕದಲ್ಲಿರುವ ನ್ಯಾಯಾಲಯದ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ದ್ವಿಚಕ್ರವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಪಾದಾಚಾರಿಗಳು ಜನನಿಬಿಡ ರಸ್ತೆಯಲ್ಲಿ ಹರಸಾಹಸ ಪಟ್ಟು ಓಡಾಡುವಂತಾಗಿದೆ.

ಇದರಲ್ಲಿ ವಾಹನಗಳ ಸವಾರರ ತಪ್ಪಿಲ್ಲ. ತಾಲ್ಲೂಕು ಆಡಳಿತ ಅಥವಾ ನಗರಸಭೆಯೇ ವಾಹನಗಳ ನಿಲುಗಡೆಗೆ ನಿರ್ದಿಷ್ಟ ಸ್ಥಳ ಗುರುತಿಸಿಲ್ಲ. ತಾಲ್ಲೂಕು ಆಡಳಿತ ಭವನದ ಆವರಣದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ಸಾರ್ವಜನಿಕರು ಓಡಾಡಲು ಅನುಕೂಲ ಕಲ್ಪಿಸಬೇಕು ಎನ್ನುವ ಪ್ರಬಲ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಠಾಣೆ ಮುಂಭಾಗಗಳಲ್ಲಿ ಆಯಾ ಕಚೇರಿಗಳ ಹಿರಿಯ ಅಧಿಕಾರಿಗಳು ವಾಹನಗಳ ನಿಲುಗಡೆಗೆ ಸ್ವಲ್ಪ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಆ ಕಚೇರಿಗಳ ಎದುರು ಅಷ್ಟೇನು ತೊಂದರೆ ಇರುವುದಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.

ತಾಲ್ಲೂಕು ಆಡಳಿತ ಭವನ, ನಗರಸಭೆ ಕಚೇರಿ ಎದುರು-ಬದುರಾಗಿವೆ. ಜತೆಗೆ ಸುತ್ತಮುತ್ತಲು ಅಂಗಡಿ-ಮುಂಗಟ್ಟು, ಹೋಟೆಲ್‌ಗಳು, ಸೈಬರ್ ಕೇಂದ್ರಗಳು, ಹಣ್ಣು ತರಕಾರಿ ಅಂಗಡಿಗಳಿವೆ. ಇಲ್ಲಿಗೆ ಬರುವವರು ಸಹ ಇಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ದೂರಲಾಗಿದೆ.

ನಗರಸಭೆ, ತಾಲ್ಲೂಕು ಆಡಳಿತವು ಮಂಗಳವಾರ ನಗರದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದವು. ಜಿಲ್ಲಾಧಿಕಾರಿ, ತಹಶೀಲ್ದಾರ್ ಭಾಗವಹಿಸಿದ್ದರು. ಪಾದಾಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಅಂಗಡಿ, ಟೀ, ಹಣ್ಣು ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು. ತಾಲ್ಲೂಕು ಆಡಳಿತ ಭವನದಲ್ಲೇ ಸ್ವಚ್ಛತೆ ಇಲ್ಲ. ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂದು ರಾಮಯ್ಯ ಎಂಬ ಹಿರಿಯ ನಾಗರಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.