ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Dengue Fever | ಬಾಗೇಪಲ್ಲಿ: ಸೊಳ್ಳೆ ನಿವಾರಣೆಗೆ ಫಾಗಿಂಗ್

Published 9 ಜುಲೈ 2024, 13:55 IST
Last Updated 9 ಜುಲೈ 2024, 13:55 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ 23 ವಾರ್ಡ್‍ಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿರುವುದರಿಂದ, ಸೊಳ್ಳೆ, ಲಾರ್ವ ನಿವಾರಣೆ ಮಾಡಲು ಪುರಸಭೆಯಿಂದ ಫಾಗಿಂಗ್ ಮಾಡಿಸಲಾಯಿತು.

ತಾಲ್ಲೂಕಿನಲ್ಲಿ 15 ಡೆಂಗಿ ಪ್ರಕರಣ ದಾಖಲಾಗಿದೆ. ಇದರಿಂದ ಪುರಸಭಾ ಅಧಿಕಾರಿಗಳು ಸೊಳ್ಳೆಗಳ ನಿಯಂತ್ರಣಕ್ಕೆ, ಔಷಧಿ ಸಿಂಪಡಣೆ, ಚರಂಡಿ ಸ್ವಚ್ಛತೆ ಮಾಡಿಸಬೇಕು ಎಂದು ಸಾರ್ವಜನಿಕರು ಪುರಸಭಾ ಮುಖ್ಯಾಧಿಕಾರಿಗೆ ಒತ್ತಡ ಹಾಕಿದ್ದರು.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಫಾಗಿಂಗ್ ಯಂತ್ರ ತರಿಸಿ ವಾರ್ಡ್‍ಗಳಲ್ಲಿ ಫಾಗಿಂಗ್ ಮಾಡಿಸಿದ್ದಾರೆ. ಪ್ರತಿಯೊಬ್ಬರು ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು, ಚರಂಡಿಗಳನ್ನು ಸ್ವಚ್ಛತೆ ಮಾಡಬೇಕು. ಕಸ, ಕಡ್ಡಿ, ತ್ಯಾಜ್ಯಗಳನ್ನು ಚರಂಡಿಗೆ ಹಾಕಬಾರದು. ಕಲುಷಿತ ನೀರು ನಿಂತರೆ ಸೊಳ್ಳೆಗಳು, ಲಾರ್ವ ಉತ್ಪತ್ತಿ ಆಗುತ್ತದೆ ಎಂದು ತಿಳಿಸಿದರು.

ಪುರಸಭಾ ಅಧಿಕಾರಿ ಅಥಾವುಲ್ಲಾ, ಆರೋಗ್ಯ ನಿರೀಕ್ಷಕಿ ಉಷಾರಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT