‘ಮೊಟ್ಟೆ ವಿತರಣೆ ಅನ್ಯರಿಗೆ ವಹಿಸಿ’
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇರುವ ಶಿಕ್ಷಕರು ಬಿಸಿಯೂಟ ಮೊಟ್ಟೆ ವಿತರಣೆ ಕ್ಷೀರಭಾಗ್ಯ ಕಲಿಕಾ ಸಿರಿ ನಲಿಕಲಿ ಪ್ರತಿಭಾ ಕಾರಂಜಿ ಮುಂತಾದ ಕಾರ್ಯಕ್ರಮಗಳ ಜಾರಿ ಮತ್ತು ಅವುಗಳ ದಾಖಲೆ ನಿರ್ವಹಣೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಮೊಟ್ಟೆ ವಿತರಣೆ ಹೊಣೆಯನ್ನು ಅನ್ಯರಿಗೆ ವಹಿಸಬೇಕು ಎಂಬುದು ಶಿಕ್ಷಕರ ಒತ್ತಾಯ. ಪ್ರತಿನಿತ್ಯ ಶಿಕ್ಷಕರು ಮಾರುಕಟ್ಟೆಗೆ ಹೋಗಿ ಮೊಟ್ಟೆ ತರುವುದು ಹೆಚ್ಚುವರಿ ಜವಾಬ್ದಾರಿಯಾಗಿದೆ. ಶಿಕ್ಷಕರಿಗೆ ಈ ಹೊರೆಯನ್ನು ತಗ್ಗಿಸಬೇಕು. ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕಿಯನ್ನು ಗುತ್ತಿಗೆದಾರರ ಮೂಲಕ ಪೂರೈಸಬೇಕು ಎನ್ನುತ್ತಾರೆ ಶಿಕ್ಷಕರು.