ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ₹600 ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

Published : 9 ಸೆಪ್ಟೆಂಬರ್ 2024, 15:51 IST
Last Updated : 9 ಸೆಪ್ಟೆಂಬರ್ 2024, 15:51 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ವಾತಾವರಣದ ಏರುಪೇರು ನಡುವೆ ರೇಷ್ಮೆ ಗೂಡಿನ ಬೆಲೆ ₹600ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಮವಾರ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆಗೂಡು ₹608ಕ್ಕೆ ಮಾರಾಟವಾಗಿದೆ.

ಕಳೆದ ಜುಲೈನಲ್ಲಿ ₹350ರ ಆಸುಪಾಸಿನಲ್ಲಿದ್ದ ಬೆಲೆ ಈಗ ಸರಾಸರಿ ₹550ಗೆ ಮಾರಾಟವಾಗುತ್ತಿದೆ. ಇದರಿಂದ ರೇಷ್ಮೆಹುಳುವಿನ ಸಾಕಾಣಿಕೆಗಾಗಿ ರೇಷ್ಮೆ ಕೃಷಿಕರು ಉತ್ಸಾಹಿತರಾಗಿದ್ದಾರೆ.

ಸಾಮಾನ್ಯವಾಗಿ ಗೂಡಿನ ಬೆಲೆ ₹400ರ ಮೇಲೆ ಹರಾಜಾಗುತ್ತದೆ. ಆದರೆ, ರೇಷ್ಮೆ ಗೂಡಿನ ಗುಣಮಟ್ಟ ಹಾಗೂ ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೇಷ್ಮೆ ಬೆಳೆಗಾರರು ಉಲ್ಲಸಿತರಾಗಿದ್ದಾರೆ. ಹೀಗಾಗಿ ಗೂಡಿನ ಬೆಲೆ ₹600ರ ಗಡಿ ದಾಟಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.

ರೇಷ್ಮೆಗೆ ಉತ್ತಮ ಬೆಲೆ ಸಿಗದೆ ಹಲವು ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿದ್ದಾರೆ. ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮತ್ತೆ ರೇಷ್ಮೆ ಕೃಷಿಗೆ ಮುಂದಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT