ಗುಡಿಬಂಡೆ: 2024ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯು ಮತಗಳ್ಳತನದ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಬುಧವಾರ ಪಟ್ಟಣದಲ್ಲಿ ಪೋಸ್ಟರ್ ಅಭಿಯಾನ ಕೈಗೊಂಡತು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಜಿ.ಎನ್ ಮಾತನಾಡಿ, ಬಿಜೆಪಿಯು ಲೋಕಸಭೆ ಚುನಾವಣೆ ವೇಳೆ ಕೆಲವೊಂದು ಕ್ಷೇತ್ರಗಳನ್ನು ಮೋಸ ಮಾಡಿ ಜಯಿಸಿದೆ. ತಾವು ಸೋಲುವ ಭೀತಿ ಇರುವ ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಬಿಜೆಪಿ ಸೇರಿಸಿದೆ ಎಂದು ದೂರಿದರು.

ಈ ನಿಟ್ಟಿನಲ್ಲಿ ಯೂತ್ ಕಾಂಗ್ರೆಸ್ನಿಂದ ಜನರಿಗೆ ಅರಿವು ಮೂಡಿಸಲು ಮತಗಳ್ಳತನದ ವಿರುದ್ಧ ಪೋಸ್ಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಕೆಡಿಪಿ ಸದಸ್ಯ ಹಳೆ ಗುಡಿಬಂಡೆ ಲಕ್ಷ್ಮಿನಾರಾಯಣ, ಅಂಬರೀಷ್, ಜಿ.ವಿ.ಗಂಗಪ್ಪ, ವಿಕಾಸ್, ರಾಜರೆಡ್ಡಿ, ದಪ್ಪರ್ತಿ ನಂಜುಂಡ, ಚಾಂದು, ಬಡ್ಡು, ರಮೇಶ್, ಯುವ ಕಾಂಗ್ರೆಸ್ ಮುಖಂಡರಾದ ಕೈಫ್, ಮಧು, ಬಾಲಾಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.