ಶಿಡ್ಲಘಟ್ಟ: ಬೆನ್ನುಹುರಿ ಅಪಘಾತಕ್ಕೆ ಒಳಗಾದವರನ್ನು ರಾಜ್ಯ ಸರ್ಕಾರದ 2016ರ ಕಾಯ್ದೆ ಅನ್ವಯ ಗುರುತಿಸಲಾದ 21 ಅಂಗವಿಕಲತೆಯ ಪಟ್ಟಿಯ ಜೊತೆಗೆ 22ನೇ ಅಂಗವಿಕಲತೆಯಾಗಿ ಸೇರಿಸಬೇಕು. ಅಂಗವಿಕಲರಿಗೆ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಏರಿಸಬೇಕು ಎಂದು ಎಸ್ಸಿಐ ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು ಒತ್ತಾಯಿಸಿದರು.

ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಎಸ್ಸಿಐ ನವಜೀವನ ಸೇವಾ ಸಂಘ, ಎಪಿಡಿ ಸಂಸ್ಥೆ ಬೆಂಗಳೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬೆನ್ನುಹುರಿ ಅಪಘಾತಕ್ಕೊಳಗಾದವರ ದಿನಾಚರಣೆಯಲ್ಲಿ ಮಾತನಾಡಿದರು.

ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಸರ್ಕಾರದಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉಚಿತ ಮೆಡಿಕಲ್ ಕಿಟ್ ನೀಡುವ ವ್ಯವಸ್ಥೆ ಜೊತೆಗೆ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಮಾಡಬೇಕು ಎಂದರು.

ಎಪಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಮಾತನಾಡಿ, ರಸ್ತೆ ಅಪಘಾತ, ಎತ್ತರದ ಪ್ರದೇಶ ಹತ್ತುವುದು, ಅತಿಯಾದ ಭಾರ ಹೊರುವುದು ಬೆನ್ನುಹುರಿ ಅಪಘಾತಕ್ಕೆ ಕಾರಣವಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಜಾಗೃತೆಯಿಂದಿರಬೇಕು ಎಂದರು.

ಪ್ರಾಂಶುಪಾಲ ಮುರಳಿಆನಂದ್ ಮಾತನಾಡಿದರು. ಬೆನ್ನುಹುರಿ ಅಪಘಾತಕ್ಕೊಳಗಾದ 5 ಜನರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಔಷಧಿ ಕಿಟ್ ವಿತರಣೆ ಸೇರಿದಂತೆ ವಿದ್ಯಾರ್ಥಿ ವೇತನ ನೀಡಲಾಯಿತು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿಲಕ್ಷ್ಮಿ, ವಕೀಲ ಜಗದೀಶ್, ಎಂ.ಆರ್.ಡಬ್ಲ್ಯೂ ರಾಮಚಂದ್ರ, ಎಸ್ಸಿಐ ನವಜೀವನ ಸೇವಾ ಸಂಘದ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಮಂಜುನಾಥ್, ಸಮರ್ಥನಂ ಸಂಸ್ಥೆಯ ಪವಿತ್ರ, ಎಪಿಡಿ ಸಂಸ್ಥೆಯ ಸುಧಾ, ಗಿರಿಜಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.