ಶಿಡ್ಲಘಟ್ಟ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾಲ್ಲೂಕಿನ ಮಳಮಾಚನಹಳ್ಳಿ ಡೇರಿಯು ಹಾಲು ಸಂಗ್ರಹ ಮತ್ತು ಪೂರೈಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರತಿ ನಿತ್ಯ 3,200 ಲೀಟರ್ ಹಾಲು ಸಂಗ್ರಹವಾಗುವ ಈ ಡೇರಿಯ ಪ್ರತಿ ತಿಂಗಳ ವ್ಯವಹಾರ ₹40 ಲಕ್ಷಕ್ಕೂ ಅಧಿಕ. ನೂರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿವೆ. ಹತ್ತಾರು ಪ್ರಶಸ್ತಿಗಳು ಮಳಮಾಚನಹಳ್ಳಿ ಡೇರಿಯ ಪಾಲಾಗಿವೆ.

ಜೂನ್ 1ನೇ ತಾರೀಕು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಹುಟ್ಟಿದ ಮಗುವಿನಿಂದ ಮುದುಕರವರೆಗೂ ಎಲ್ಲ ವಯೋಮಾನದವರಿಗೂ ಹಾಲನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಉಪಯೋಗಗಳ ಬಗ್ಗೆ ವಿಶ್ವ ಹಾಲು ದಿನದಂದು ಜನ ಜಾಗೃತಿ ಮೂಡಿಸಲಾಗುತ್ತದೆ. ಹಾಲಿನ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವ ಕೆಲಸ ವಿಶ್ವ ಹಾಲು ದಿನದಂದು ಜಗತ್ತಿನಾದ್ಯಂತ ನಡೆಯಲಿದೆ.

ತಾಲ್ಲೂಕಿನ ಮಳಮಾಚನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಹಲವು ವರ್ಷಗಳಿಂದ ಅತಿ ಹೆಚ್ಚು ಹಾಲು ಪೂರೈಸುವ ಮತ್ತು ಉತ್ತಮ ಡೇರಿಯ ಪ್ರಶಸ್ತಿಗಳನ್ನು ಪಡೆದುಕೊಂಡು ಬರುತ್ತಿದೆ. ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧವಾದ ಶಿಡ್ಲಘಟ್ಟ ತಾಲ್ಲೂಕಿಗೆ ಮಳಮಾಚನಹಳ್ಳಿ ಡೇರಿಯ ಸಾಧನೆ ಒಂದು ಹೆಮ್ಮೆಯ ಗರಿ.

ಮಳಮಾಚನಹಳ್ಳಿಯಲ್ಲಿ 1970ರಲ್ಲಿ ಆರಂಭವಾದ ಹಾಲಿನ ಡೇರಿಗೆ ಇದೀಗ 55 ವರ್ಷ ತುಂಬಿವೆ. ಸುಮಾರು 300 ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿದ್ದು ಈ ಶ್ರೇಯಸ್ಸು ಈ ಗ್ರಾಮದ ರೈತ ಕುಟುಂಬಗಳಿಗೆ ಸಲ್ಲುತ್ತದೆ.

1970ರಲ್ಲಿ ಡೇರಿ ಆರಂಭವಾದಾಗ ಅಂದಿನ ಮೊದಲ ಅಧ್ಯಕ್ಷ ಎಸ್.ಕೆ.ನಾರಾಯಣಪ್ಪ ಅವರಿಂದ ಹಿಡಿದು ಈಗಿನ ಅಧ್ಯಕ್ಷ ಆರ್.ಸತೀಶ್ ಅವರವರೆಗೂ ಎಲ್ಲ ಆಡಳಿತ ಮಂಡಳಿಗಳ ಅವಧಿಯಲ್ಲಿ ಹಾಲು ಸಂಗ್ರಹ, ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಹಾಲು ಉತ್ಪಾದಕರಿಗೆ ಕಾಲ ಕಾಲಕ್ಕೆ ಬಿಲ್ ನೀಡುವುದರಿಂದ ಹಿಡಿದು ರೈತರಿಗೆ ಅಗತ್ಯವಾದ ಬೂಸ ಹಿಂಡಿ, ಚಕ್ಕೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುವುದರಿಂದಲೂ ಡೇರಿಗೆ ಲಾಭ ಬರುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಎರಡು ಜಿಲ್ಲೆಗಳಲ್ಲಿಯೆ ಅತಿ ದೊಡ್ಡದಾದ ಮೂರಂತಸ್ತಿನ ಹಾಲು ಡೇರಿ ಕಟ್ಟಡವನ್ನು ಹೊಂದಿದ್ದು, ಬೃಹತ್ ಸಭಾಂಗಣವನ್ನು ಹೊಂದಿದೆ. ಪ್ರತಿ ನಿತ್ಯ ಹಾಲು ಉತ್ಪಾದಕರಿಗೆ ಅವರು ಹಾಕಿದ ಹಾಲಿನ ಪ್ರಮಾಣ, ಗುಣಮಟ್ಟ, ಜಿಡ್ಡಿನಾಂಶ ಮತ್ತು ರೈತರಿಗೆ ಸಂದಾಯವಾಗುವ ಹಣದ ಲೆಕ್ಕ ಮೊಬೈಲ್ಗೆ ರವಾನೆಯಾಗುತ್ತದೆ.

ಜಿಲ್ಲೆಯಲ್ಲಿಯೆ ಅತಿ ಹೆಚ್ಚು ರೈತರನ್ನು ಯಶಸ್ವಿನಿ ಯೋಜನೆಗೆ ನೋಂದಾಯಿಸಿದ ಕೀರ್ತಿಯೂ ಮಳಮಾಚನಹಳ್ಳಿ ಡೇರಿಗೆ ಸಲ್ಲುತ್ತದೆ.

ಪ್ರಮಾಣ ಪತ್ರ

ಡೇರಿ ಡಿಪ್ಲೊಮಾ ಪದವಿ ಓದುವ ವಿದ್ಯಾರ್ಥಿಗಳು ಈ ಡೇರಿಯಲ್ಲಿ 15 ದಿನ ಕೆಲಸ ಮಾಡಿ ಕಲಿತರೆ ಅವರಿಗೆ ಅನುಭವ ಪ್ರಮಾಣ ಪತ್ರವನ್ನು ನೀಡುವ ಏಕೈಕ ಡೇರಿಯೂ ಇದಾಗಿದೆ. ಇಲಾಖೆಯಿಂದ ಅನುಮತಿ ನೀಡಿರುವ ಗರಿಮೆಯೂ ಮಳಮಾಚನಹಳ್ಳಿ ಡೇರಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.