ಗೌರಿಬಿದನೂರು: ‘ನೂರು ಕಾದಂಬರಿಗಳನ್ನು ಬರೆಯಬಹುದು. ಆದರೆ ಕ್ಷೇತ್ರಕಾರ್ಯ ಮಾಡಿ ಇತಿಹಾಸ ಕೃತಿ ರಚಿಸುವುದು ಕಷ್ಟ’ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ನಗರದಲ್ಲಿ ಭಾನುವಾರ ತಾಲ್ಲೂಕು ಇತಿಹಾಸ ಮತ್ತು ಪುರಾತತ್ವ ಹಾಗೂ ಗೌರಿಬಿದನೂರು ತಾಲ್ಲೂಕು ಶಾಸನಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದ ಇತಿಹಾಸದ ಬಗ್ಗೆ 7 ವರ್ಷ ಸಂಶೋಧನೆ ನಡೆಸಿ ಶಿಲಾಶಾಸನಗಳ ಬಗ್ಗೆ ಅಧ್ಯಯನ ಮಾಡಿ ಶಿಲಾಶಾಸನಗಳ ಅಕ್ಷರಗಳನ್ನು ಪುಸ್ತಕ ರೂಪದಲ್ಲಿ ತರಲು ಲೇಖಕ ಡಾ.ವೆಂಕಟೇಶ್ ಅವರ ಕೆಲಸ ಶಾಶ್ವತವಾಗಿದೆ. ಇದು ಕ್ಷೇತ್ರದ ಇತಿಹಾಸವನ್ನು ಬಿಂಬಿಸುವ ಕೆಲಸ ಎಂದರು.

ಗೌರಿಬಿದನೂರು ತಾಲ್ಲೂಕು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮಾತ್ರ ಜನರಿಗೆ ತಿಳಿದಿದೆ. ಆದರೆ ರಾಜ ಮಹಾರಾಜರ ಆಳ್ವಿಕೆಯ ಇತಿಹಾಸದ ಶಿಲಾಶಾಸನಗಳನ್ನು ಹುಡುಕಿ ಅವುಗಳನ್ನು ಅಕ್ಷರದ ಮೂಲಕ ಪುಸ್ತಕವನ್ನು ಹೊರ ತಂದಿರುವುದು ನಮ್ಮ ಕ್ಷೇತ್ರದ ಇತಿಹಾಸವನ್ನು ಇಡೀ ದೇಶಕ್ಕೆ ಸಾರುವಂತಹ ಕೆಲಸವಾಗಿದೆ ಎಂದರು.

ಲೇಖಕ ಡಾ.ಎಸ್.ವೆಂಕಟೇಶ್ ಮಾತನಾಡಿ, ಯಾವುದೇ ಇತಿಹಾಸವನ್ನು ತಿರುಚಬಾರದು. ವಾಸ್ತವಾಂಶದ ಬಗ್ಗೆ, ನೈಜ ಘಟನಗಳ ಆಧಾರಗಳನ್ನು ಶಿಲಾ ಶಾಸನಗಳಿಂದ ಅಧ್ಯಯನವನ್ನು ಮಾಡಿ ಈ ಪುಸ್ತಕವನ್ನು ಸಮಾಜಕ್ಕೆ ಲೋಕಾರ್ಪಣೆ ಮಾಡಲಾಗಿದೆ. ಇತಿಹಾಸ ಕಾಲಾನುಕ್ರಮದಲ್ಲಿ ಕಳೆದು ಹೋಗುತ್ತದೆ. ತಾಲ್ಲೂಕಿನ ಇತಿಹಾಸವನ್ನು ಹಾಗೆ ಆಗಲು ಬಿಡದೆ ದಾಖಲು ಮಾಡುವ ಕೆಲಸ ಮಾಡಲಾಗಿದೆ ಎಂದರು.

ಸಾಹಿತಿ ಕಾನಾ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ 420 ಗ್ರಾಮಗಳನ್ನು ಸುತ್ತಿ ಅವಜ್ಞೆಗೆ ಒಳಗಾಗಿದ್ದ ಶಾಸನ, ಪಾಳು ಬಿದ್ದಿದ್ದ ಕೋಟೆ ಕೊತ್ತಲ, ದೇವಾಲಯಗಳನ್ನು ತಡಕಾಡಿ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಗ್ರಂಥ ರಚಿಸಲಾಗಿದೆ ಎಂದರು.

ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ತಾಲ್ಲೂಕಿನ ಇತಿಹಾಸವನ್ನು ಶಾಸನಗಳ ಆಧಾರದ ಮೇಲೆ ದಾಖಲು ಮಾಡುವುದಾಗಿ ಡಾ.ಎಸ್.ವೆಂಕಟೇಶ್ ಮತ್ತು ಕಾನಾಶ್ರೀ ತಿಳಿಸಿದಾಗ ಸಂತೋಷವಾಯಿತು ಎಂದರು.

ಡಾ.ಎಚ್.ನರಸಿಂಹಯ್ಯ ಉಪವಿಜ್ಞಾನ ಕೇಂದ್ರದಲ್ಲಿ ಈಗಾಗಲೇ ಲಿಪಿ ಮನೆ ನಿರ್ಮಿಸುತ್ತಿದ್ದೇವೆ. ಇದರ ಜೊತೆಗೆ ಶಾಸನಗಳ ಉದ್ಯಾನ ನಿರ್ಮಿಸಿ ತಾಲ್ಲೂಕಿನ ಶಾಸನಗಳ ರಕ್ಷಣೆ ಮಾಡುತ್ತೇನೆ ಎಂದರು.

ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ಶಿಲಾ ಶಾಸನಗಳನ್ನು ಅಧ್ಯಯನ ಮಾಡಿ ಇತಿಹಾಸವನ್ನು ತಿಳಿದುಕೊಂಡು ಅದನ್ನು ಜನತೆಗೆ ಮುಟ್ಟಿಸುವುದು ಮಹತ್ತರ ಕೆಲಸ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಳೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, ಶಾಸನತಜ್ಞ ಡಾ.ಶೇಷಶಾಸ್ತ್ರಿ, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಪ್ರಾಧ್ಯಾಪಕಿ ಅನುರಾಧ, ಸಾಹಿತಿ ಕಾನಾಶ್ರೀನಿವಾಸ, ನಟ ಶ್ರೀನಿವಾಸಪ್ರಭು, ಪೌರಾಯುಕ್ತ ಕೆ.ಜಿ.ರಮೇಶ್, ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ ಮಾತನಾಡಿದರು. ಇಸ್ರೋ ವಿಜ್ಞಾನಿ ಶ್ರೀನಾಥ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.