ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಜಿಲ್ಲಾ ಪೊಲೀಸ್ ಇಲಾಖೆ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಪೊಲೀಸ್ ಇಲಾಖೆಯನ್ನು ಜನ ಸ್ನೇಹಿಯಾಗಿ ರೂಪಿಸಲು ಹೆಜ್ಜೆ ಇಟ್ಟಿದೆ.

ಈ ಭಾಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಎಸ್ಜೆಸಿಐಟಿ ಸಹಕಾರದಲ್ಲಿ ರೂಪಿಸಿರುವ ‘ನಮ್ಮ ಕಾಪ್ 24/7 ಚಾಟ್ ಬೋಟ್’ ವಾಟ್ಸ್ಆ್ಯಪ್ ಸೇವೆಗೆ ಬುಧವಾರ ಚಾಲನೆ ನೀಡಲಾಯಿತು.

ನಗರದ ಎಸ್ಜೆಸಿಐಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೇವೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ‘ಈ ವಾಟ್ಸ್ಆ್ಯಪ್ ಸೇವೆಯ ಮೂಲ ಉದ್ದೇಶವು ಸಾರ್ವನಿಕರ ಸಮಸ್ಯೆಯ ಪರಿಹಾರವಾಗಿದೆ. ಕೆಲವು ವೇಳೆ ನಾಗರಿಕರಿಗೆ ಪೊಲೀಸ್ ಸೇವೆಗಳು, ಮಾಹಿತಿ ಇತ್ಯಾದಿ ಕಾರಣಕ್ಕೆ ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ಇರುವುದಿಲ್ಲ. ಜನಸ್ನೇಹಿಯಾಗಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ಈ ಸೇವೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಚಾಟ್ ಬೋಟ್ನಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಬೇರೆ ಬೇರೆ ಸೇವೆಗಳು ಸಹ ದೊರೆಯುತ್ತವೆ. ಬೀಟ್ ಪೊಲೀಸರು, ಅವರ ಸಂಪರ್ಕ ಸಂಖ್ಯೆ, ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಸಹ ದೊರೆಯುತ್ತದೆ. ಹಾಯ್ ಎಂದು 9480802538 ಸಂಖ್ಯೆಯ ವಾಟ್ಸ್ಆ್ಯಪ್ಗೆ ಸಂದೇಶ ಕಳುಹಿಸಿದರೆ ‘ನಮ್ಮ ಕಾಪ್’ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು.

ಎಸ್ಜೆಸಿಐಟಿ ಪ್ರಾಂಶುಪಾಲ ಜಿ.ಟಿ ರಾಜು ಮಾತನಾಡಿ, ‘ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರಾಂಜಲ ಮತ್ತು ಮೂವರು ವಿದ್ಯಾರ್ಥಿಗಳು ಸೇರಿ ಈ ತಂತ್ರಜ್ಞಾನ ಅಭಿವೃದ್ಧಿಗೊಳಿಸಿದ್ದಾರೆ’ ಎಂದು ಹೇಳಿದರು.

ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ನಂಬರ್ಗೆ ವಾಟ್ಸ್ಆ್ಯಪ್ ಮಾಡಿ

ಪೊಲೀಸ್ ಇಲಾಖೆಯಿಂದ ಅಗತ್ಯ ನೆರವು ಮಾಹಿತಿ ಬೇಕಾದವರು 9480802538 ವಾಟ್ಸ್ಆ್ಯಪ್ ಸಂಖ್ಯೆಗೆ ಯಾವ ಮಾಹಿತಿ ಅಥವಾ ಸಹಾಯ ಬೇಕು ಎಂದು ಮಾಹಿತಿ ನೀಡಿದರೆ ತಕ್ಷಣವೇ ಆ ಮಾಹಿತಿ ದೊರೆಯುತ್ತದೆ. ಕನ್ನಡ ತೆಲುಗು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿಯೂ ಮಾಹಿತಿಯನ್ನು ಕೇಳಬಹುದು ಮತ್ತು ಮಾಹಿತಿ ಪಡೆಯಬಹುದು. ಈ ವಾಟ್ಸ್ಆ್ಯಪ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

ಎಸ್ಪಿ ಪತ್ನಿಯ ನೇತೃತ್ವ

ಎಸ್ಪಿ ಕುಶಾಲ್ ಚೌಕ್ಸೆ ಅವರ ಪತ್ನಿ ಎಸ್ಜೆಸಿಐಟಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಪ್ರಾಂಜಲಾ ಅವರು ಮೂವರು ವಿದ್ಯಾರ್ಥಿಗಳ ಜೊತೆಗೂಡಿ ಈ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ‘ಮೇಟಾ ಎ.ಐ ರೀತಿಯಲ್ಲಿ ‘ನಮ್ಮ ಕಾಪ್ 24/7 ಚಾಟ್ ಬೋಟ್’ ಕೆಲಸ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.